ಸಂತ ಜೋಸೆಫ್ ವಿಶ್ವವಿದ್ಯಾಲಯದಲ್ಲಿ 24-ಗಂಟೆಗಳ ಐಟಿ ಹ್ಯಾಕಥಾನ್ ‘ಟೆಕ್ ಕ್ವೆಸ್ಟ್’

ಬೆಂಗಳೂರಿನ ಸಂತ ಜೋಸೆಫ್ ವಿಶ್ವವಿದ್ಯಾಲಯವು 2024ರ ಏಪ್ರಿಲ್ 5 ಮತ್ತು 6 ರಂದು “ಟೆಕ್ ಕ್ವೆಸ್ಟ್” ಎಂಬ 24-ಗಂಟೆಗಳ ಐಟಿ ಹ್ಯಾಕಥಾನ್ ಅನ್ನು ಯಶಸ್ವಿಯಾಗಿ ನಡೆಸಿತು. ಸಂಸ್ಥೆಯ ಡೀನ್ ಫಾ. ಡೆನ್ಜಿಲ್ ಲೋಬೊ ಎಸ್‌ಜೆ, ಡಾ. ಬಿ.ಜಿ. ಪ್ರಶಾಂತಿ ಮತ್ತು ಪ್ರೇಮ್ ಸಾಗರ್ ಇವರ ನೇತೃತ್ವದಲ್ಲಿ, ಪ್ರಸಿದ್ಧ ಬ್ರ್ಯಾಂಡ್‌ಗಳಾದ ಯುನಿಬಿಕ್, ವಂಡರ್’ಲಾ, ಡ್ಯಾನಿಲ್ ವಿಲೋವ್ ಮತ್ತು ಎಸ್‌ಎಸ್ ಫ್ಯಾಶನ್ಸ್’ಗಳ ಬ್ರಾಂಡ್ ಸರಕುಗಳ ಪ್ರಾಯೋಜಕತ್ವದಿಂದ 24-ಗಂಟೆಗಳ ಸವಾಲಿನ ಈ ಕಾರ್ಯಕ್ರಮವು ದೇಶಾದ್ಯಂತದ ವಿದ್ಯಾರ್ಥಿಗಳ ಮತ್ತು ವೃತ್ತಿಪರರ 24 ತಂಡಗಳ ಭಾಗವಹಿಸುವಿಕೆಯಿಂದ ಯಶಸ್ವಿಯಾಗಿ ನೆರವೇರಿತು.

ತಂಡಗಳು ಫಿನ್‌ಟೆಕ್ ಮತ್ತು ಹೆಲ್ತ್’ಕೇರ್‌ ಗೆ ಸಂಬಂಧಿಸಿದ ಸವಾಲುಗಳನ್ನು ನಿಭಾಯಿಸಿದವು. ವಿಜೇತ ತಂಡಕ್ಕೆ 20,000/- ಮೊತ್ತದ ಬಹುಮಾನವನ್ನು ಘೋಷಿಸಲಾಗಿತ್ತು.

ಫಾ. ಡೆನ್ಜಿಲ್ ಲೋಬೊ ಎಸ್‌ಜೆ, ಅಭ್ಯರ್ಥಿಗಳ ಹೇರಳವಾದ ಪ್ರತಿಭೆ ಮತ್ತು ಸಾಧನೆಗಳಿಗಾಗಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಉತ್ತಮ ಕೋಡಿಂಗ್ ಕೆಲಸಗಳ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು. ಬಲವಾದ ಕೋಡಿಂಗ್ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವುದರಿಂದ ಉತ್ತಮ ಸಾಫ್ಟ್’ವೇರನ್ನು ವಿನ್ಯಾಸಗೊಳಿಸಲು ಮತ್ತು ಮಾನಸಿಕ ಸಾಮರ್ಥ್ಯಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂಬುದನ್ನು ತಿಳಿಸಿದರು.

ಭಾಗವಹಿಸಿದ, ಕೊಡುಗೆ ಮತ್ತು ಸಹಾಯಹಸ್ತ ನೀಡಿದ ಎಲ್ಲರಿಗೂ ಡಾ ಬಿ.ಜಿ. ಪ್ರಶಾಂತಿ ಕೃತಜ್ಞತೆಯನ್ನು ಸಲ್ಲಿಸಿದರು. ಸೇಂಟ್ ಜೋಸೆಫ್ ವಿಶ್ವವಿದ್ಯಾಲಯ ಮತ್ತು ಅದರ ಕಂಪ್ಯೂಟರ್ ಸೈನ್ಸ್ ವಿಭಾಗದ ಕುರಿತು ಹೆಚ್ಚಿನ ಮಾಹಿತಿಗಾಗಿ, www.sju.edu.in ಸಂಪರ್ಕಿಸಬಹುದಾಗಿ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಯೂನಿವರ್ಸಿಟಿಯ ಡೀನ್ ಫಾ. ಡೆನ್ಜಿಲ್ ಲೋಬೊ ತಿಳಿಸಿದ್ದಾರೆ.

Support Kittall

Kittall has been a free portal in konkani, publishing non-stop since 2011.
Kittall publishes poetry, fiction and prose from veteran and youth writers.
Kittall also posts news and news analysis in Konkani, Kannada and English.
Alternative media needs readers support.
Kittall counts on your support in its endeavour of preserving  konkani literature for the generations to come. 

 

Leave a Comment

© All Right Reserved. Kittall Publications. 

-
00:00
00:00
Update Required Flash plugin
-
00:00
00:00