ನ್ಯೂಸ್‌ ಕರ್ನಾಟಕಕ್ಕೆ 9ನೇ ಸಾಂಸ್ಕೃತಿಕ ಸಿಂಚನ ಕಾರ್ಯಕ್ರಮದಲ್ಲಿ ‘ಸಾಧನಶ್ರೀ ಪ್ರಶಸ್ತಿ’ ಗೌರವ

ಡಾ. ಪುನೀತ್ ರಾಜಕುಮಾರ್ ಜನ್ಮದಿನಾಚರಣೆ ಹಾಗೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ‘ಇದು ನಿಮ್ಮ ವಾಹಿನಿ ಕಲಾವೇದಿಕೆ (ರಿ)’ ಬೆಂಗಳೂರು ಇವರು ಬೆಂಗಳೂರಿನ ಜೆಸಿ ರಸ್ತೆ, ಕನ್ನಡ ಭವನ ನಯನ ರಂಗ ಮಂದಿರದಲ್ಲಿ ಆಯೋಜಿಸಿದ  9ನೇ ಸಾಂಸ್ಕೃತಿಕ ಸಿಂಚನ ಕಾರ್ಯಕ್ರಮದಲ್ಲಿ  ನ್ಯೂಸ್‌ ಕರ್ನಾಟಕಕ್ಕೆ  ‘ಸಾಧನಶ್ರೀ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮವನ್ನು ಬೆಂಗಳೂರು ಉಚ್ಚ ನ್ಯಾಯಾಲಯ ವಕೀಲರು ಪ್ರಮೀಳಾ ನೇರ್ಸಗಿ ಉದ್ಘಾಟಿಸಿದರು. ಬೆಂಗಳೂರಿನ ಸಮಾಜಸೇವಕ ಶಾಂತಾ ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹಾಯ್ ಬೆಂಗಳೂರು ಪ್ರಧಾನ ಸಂಪಾದಕಿ ಭಾವನಾ ಬೆಳಗೆರೆ, ಸಹಸ ಕಲಾವಿದ ಅಪ್ಪು ವೆಂಕಟೇಶ್, ಕೆಜಿಎಫ್ ಖ್ಯಾತಿಯ ಕಲಾವಿದ ಅನ್ಮೋಲ್ ವಿಜಯ್ ಭಟ್ಕಳ್ ಹಾಗೂ ಕಲಾವಿದ ಅವಿನಾಶ್ ಭಾಗಿಯಾಗಿದ್ದರು.  ಬಿಗ್ ಬಾಸ್ ಸೀಸನ್ 10 ವಿನ್ನರ್ ಹಾಗೂ ಕಲಾವಿದ ಕಾರ್ತಿಕ್ ಮಹೇಶ  ಅವರು ವಾಯ್ಸ್‌ ಮೇಸೆಜ್‌ ಮೂಲಕ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ನ್ಯೂಸ್ ಕರ್ನಾಟಕ ಜತೆ  9ನೇ ಸಾಂಸ್ಕೃತಿಕ ಸಿಂಚನ ಕಾರ್ಯಕ್ರಮದಲ್ಲಿ – ಡಾ. ಸವಿತಾ ಕೆ.ಸಿ. ಸಂಸ್ಥಾಪಕರು, ಚರೀಶ್ ಕಿಡ್ಸ್, ಬೆಂಗಳೂರು, ಜ್ಯೋತಿ ರೆಡ್ಡಿ ಮಾಲೀಕರು, ಮೈ ಆಲ್ಬಂ ಝೊನ್ ಬೆಂಗಳೂರು , ಸೈಯದ್ ಸಾಧಿಕ್, ಮಾಲೀಕರು, ಡೈನಾಮಿಕ್ ಯುನಿವರ್ಸಲ್ ಮಾರ್ಕೆಟಿಂಗ್, ಬೆಂಗಳೂರು, ಪಿ. ಅರುಣಾಕುಮಾರಿ ಸಮಾಜಸೇವಕರು, ಆರ್. ಚಂದ್ರಶೇಖರ್ ಸಿನಿ-ಸಂಪಾದಕರು, ಕೋಲಾರವಾಣಿ ಪತ್ರಿಕೆ, ಶ್ಯಾಮ್ ಸುಂದರ್ ಟಿ. ಸಂಸ್ಥಾಪಕರು, ಯು ಟಿವಿ, ಯು ಟ್ಯೂಬ್ ಚಾನೆಲ್, ವಿರೇಶ್ ಎಸ್. ಕಂಟೆಂಟ್ ರೈಟರ್ ಮತ್ತು ಕ್ರಿಯೇಟರ್, ಕ್ಯಾನ್ಲಿಷ್ ನ್ಯೂಸ್, ಯು ಟ್ಯೂನ್ ಚಾನೆಲ್, ಕಡಬ ಶ್ರೀನಿವಾಸ್ ಜಾನಪದ ಹಾಸ್ಯ ಜಾದುಗಾರ, ರಾಜೇಂದ್ರ ಹಳ್ಳೂರು ಜ್ಯೂ. ರಾಜ್ ಕುಮಾರ್ ಧ್ವನಿ ಗಾಯಕರು ಬೆಂಗಳೂರು, ತನುಶ್ರೀ ಭರತನಾಟ್ಯ ಗುರುಗಳು, ಬೆಂಗಳೂರು, ಎ. ಎಸ್. ಆರತಿ ಸುರೇಶ್ ಭರತನಾಟ್ಯ ಗುರುಗಳು, ಬೆಂಗಳೂರು, ಮೊನಿಶಾ ಭರತನಾಟ್ಯ ಗುರುಗಳು ಬೆಂಗಳೂರು, ಸಿ. ಎಸ್. ಮಹಾದೇವ್ ಪೂಜಾ ಕುಣಿತ ಕಲಾವಿದರು, ಸಿ.ಎಸ್. ಸಿದ್ದರಾಜು ಪೂಜಾ ಕುಣಿತ ಕಲಾವಿದರು, ಮಲ್ಲೇಶ್ ಗೊರವರ ಕುಣಿತ ಕಲಾವಿದರು, ದೊಡ್ಡಮಲ್ಲಯ್ಯ ಗೊರವರ ಕುಣಿತ ಕಲಾವಿದರು, ಹೊಸಹಳ್ಳಿ ಪಾಳ್ಯ, ಕುಮಾರ್ ಜಿ. ಗೊರವರ ಕುಣಿತ ಕಲಾವಿದರು, ರಾಮಕೃಷ್ಣ ಗೊರವರ ಕುಣಿತ ಕಲಾವಿದರು, ಮಧುಕುಮಾ‌ರ್ ಜೆ. ಗೊರವರ ಕುಣಿತ ಕಲಾವಿದರು, ಆನಂದ್ ಗೊರವರ ಕುಣಿತ ಕಲಾವಿದರು, ಗಣಾಚಾರಿ ಲಕ್ಷ್ಮೀನಾರಾಯಣ್ ಗೊರವರ ಕುಣಿತ ಕಲಾವಿದರು, ಮಹೇಶ್ ಸಿ. ಗೊರವರ ಕುಣಿತ ಕಲಾವಿದರು, ರಾಮು ಎ. ಎಸ್ ತಮಟೆ ಕಲಾವಿದರು, ಸುಮಂತ್ ತಮಟೆ ಕಲಾವಿದರು ಮತ್ತು ಸಿ. ಎಸ್ ಉಮೇಶ್ ವೀರಗಾಸೆ ಕಲಾವಿದರು ಇವರಿಗೂ ಸಾಧನಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಎ.ಎಸ್ ಆರತಿ ಸುರೇಶ್ ನಿರ್ದೇಶನದಲ್ಲಿ ಎಸ್ ತಿಲಕ್ ರಾಜ್ ತಂಡದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ರಾಜೇಂದ್ರ ಹಳ್ಳೂರು ಮತ್ತು ತಂಡದಿಂದ ಸಂಗೀತ ಕಾರ್ಯಕ್ರಮ, ತನುಶ್ರೀ ಮತ್ತು ತಂಡದಿಂದ ಸಾಂಸ್ಕೃತಿಕ ಹಾಗೂ ನೃತ್ಯ ಪ್ರದರ್ಶನ, ನಾಟ್ಯ ಸನ್ನಿಧಿ ಕಲಾತಂಡದಿಂದ ಭರತನಾಟ್ಯ ಪ್ರದರ್ಶನ ಹಾಗೂ ಕಡಬ ಶ್ರೀನಿವಾಸ ಇವರಿಂದ ಜಾನಪದ ಜಾದು ಪ್ರದರ್ಶನಗೊಂಡಿತು.

‘ಇದು ನಿಮ್ಮ ವಾಹಿನಿ’ ಪತ್ರಕರ್ತ ಕಿಶೋರ್ ಕುಮಾರ್ ಕೆಎಸ್, ನೃತ್ಯ ಕಲಾವಿದ ಸುಜೀತ್, ಮಾಧ್ಯಮ ಸಲಹೆಗಾರರು ಹಿರಿಯ ಪತ್ರಕರ್ತ ನಂಜುಂಡಪ್ಪ ವಿ., ರಾಜ್ ಸಂಪಾಜೆ ನಿರೂಪಣೆ, ಭರತನಾಟ್ಯ ನೃತ್ಯ ವರ್ಷಿಣಿ, ಕಿಶನ್ ಸುರ್ವೆ ಸುಸಂದರ್ಭದಲ್ಲಿ ಕಾರ್ಯಕ್ರಮವನ್ನು ನೀಡಿದ್ದು, ಜೊತೆಗೆ ಉಪಸ್ಥಿತರಿದ್ದರು.

Support Kittall

Kittall has been a free portal in konkani, publishing non-stop since 2011.
Kittall publishes poetry, fiction and prose from veteran and youth writers.
Kittall also posts news and news analysis in Konkani, Kannada and English.
Alternative media needs readers support.
Kittall counts on your support in its endeavour of preserving  konkani literature for the generations to come. 

 

Leave a Comment

© All Right Reserved. Kittall Publications. 

-
00:00
00:00
Update Required Flash plugin
-
00:00
00:00