ಮಂಗಳೂರಿನಲ್ಲಿ ರೋಹನ್ ಎಸ್ಟೇಟ್ ನೀರ್ಮಾರ್ಗ ಹಿಲ್ಸ್

ನಿಸರ್ಗದ ಮಡಿಲಲ್ಲಿ ಸ್ವಂತ ಮನೆಯ ಕನಸು ನನಸಾಗಿಸುವ ಪ್ರಯತ್ನ

ಪ್ರಾಕೃತಿಕ ಸೌಂದರ್ಯಕ್ಕೆ ಹೆಸರುವಾಸಿಯಾದ ನೀರುಮಾರ್ಗದ ಶಾಂತ, ಸುಂದರ ಪರಿಸರದಲ್ಲಿ, ಆಧುನಿಕ ಜೀವನ ಶೈಲಿಗೆ ಅಗತ್ಯವಾದ ಅತ್ಯಾಧುನಿಕ ಸಕಲ ಸೌಕರ್ಯಗಳೊಂದಿಗೆ ರೋಹನ್ ಎಸ್ಟೇಟ್ ನೀರುಮಾರ್ಗ ಹಿಲ್ಸ್ ರೂಪುಗೊಳ್ಳುತ್ತಿದೆ. ನೀರುಮಾರ್ಗ ನಗರಕ್ಕೆ ಅತ್ಯಂತ ಹತ್ತಿರದಲ್ಲಿರುವ 9.48 ಎಕರೆ ವಿಸ್ತಾರವಾದ ಪ್ರದೇಶದಲ್ಲಿ, ರೋಹನ್ ಎಸ್ಟೇಟ್ ವಸತಿ ಬಡಾವಣೆ ನಿರ್ಮಾಣಗೊಳ್ಳುತ್ತಿದೆ. ಸುಂದರವಾಗಿ ಅಭಿವೃದ್ಧಿ ಪಡಿಸಿದ 96 ನಿವೇಶನಗಳು ಗೇಟೆಡ್ ಕಮ್ಯೂನಿಟಿಯ ಅತ್ಯುತ್ತಮ ಅನುಭವವನ್ನು ನೀಡುತ್ತದೆ. ಅಗಲವಾದ ಕಾಂಕ್ರಿಟ್ ರಸ್ತೆಗಳು, ಸರಾಗವಾಗಿ ಮಳೆ ನೀರಿನ ಹರಿವು ಹಾಗೂ ಮಳೆನೀರಿನ ಕೊಯ್ಲಿನ ವ್ಯವಸ್ಥೆಯೊಂದಿಗೆ ಅತ್ಯಾಧುನಿಕ ಸೌಲಭ್ಯಗಳು, ನಿಮ್ಮ ಮನಸ್ಸಿಗೆ ಒಪ್ಪುವಂತಹ ವಾಸ್ತು ಪ್ರಕಾರವಾಗಿರುವ ನಿವೇಶನಗಳು ಇಲ್ಲಿ ಲಭ್ಯವಿವೆ. ರೋಹನ್ ಎಸ್ಟೇಟ್‌ನಲ್ಲಿನ ಕ್ಲಬ್ ಹೌಸ್ ಸಕಲ ಸೌಕರ್ಯಗಳೊಂದಿಗೆ ಅತ್ಯಾಧುನಿಕ ಜಿಮ್ ಹೊಂದಿದೆ.

ರೋಹನ್ ಎಸ್ಟೇಟ್, ನೀರುಮಾರ್ಗ ಹಿಲ್ಸ್ ಕೇವಲ ವಾಸಸ್ಥಳವಾಗಿರದೆ, ಪ್ರಕೃತಿ ಸೌಂದರ್ಯ, ಪ್ರಶಾಂತತೆ, ನೈಸರ್ಗಿಕ ಪರಿಸರದೊಂದಿಗೆ, ರಿಸಾರ್ಟ್ ಭಾವವನ್ನು ನೀಡುತ್ತದೆ. ಅತ್ಯಾಕರ್ಷಕವಾದ ಪ್ರವೇಶ ದ್ವಾರ, ಇಡೀ ಬಡಾವಣೆಗೆ ಅಗಲವಾದ ಕಾಂಕ್ರಿಟ್ ರಸ್ತೆ ನಿರ್ಮಿಸಿ ಅಡೆತಡೆ ಇಲ್ಲದ ಸಂಚಾರದ ಅನುಭವವನ್ನು ಪಡೆಯಬಹುದಾಗಿದೆ. ಸುಸಜ್ಜಿತ ಒಳ ಚರಂಡಿ, ಸ್ಟ್ರೀಟ್ ಲೈಟ್, ಬಡಾವಣೆಗೆಂದೇ ನಿರ್ಮಿಸಲಾದ ಪ್ರತ್ಯೇಕ ಕುಡಿಯುವ ನೀರಿನ ಸಂಪರ್ಕದ ಜೊತೆಯಲ್ಲಿ ಭವಿಷ್ಯದಲ್ಲಿ ಮಂಗಳೂರು ಮಹಾ ನಗರ ಪಾಲಿಕೆಯ ವತಿಯಿಂದ ಪೂರೈಸುವ ಕುಡಿಯುವ ನೀರಿನ ಸಂಪರ್ಕ ಪಡೆಯಲು ಸಾಧ್ಯವಾಗುವಂತೆ ನೀರಿನ ವ್ಯವಸ್ಥೆ ಇದೆ.

ರೋಹನ್ ಎಸ್ಟೇಟ್ ನೀರುಮಾರ್ಗ ಹಿಲ್ಸ್ ಅಭಿವೃದ್ಧಿಗೊಳ್ಳುತ್ತಿದ್ದು ತಮ್ಮ ಮನೆಯನ್ನು ಅಥವಾ ಐಶಾರಾಮಿ ಬಂಗಲೆಯನ್ನು ನಿರ್ಮಿಸಲು ಯೋಚನೆ ಮಾಡುವುದಿದ್ದಲ್ಲಿ, ಕೂಡಲೇ ಆರಂಭಿಸಬಹುದು. ರೋಹನ್ ಕಾರ್ಪೊರೇಷನ್ ಸಂಸ್ಥೆಯ ಅನುಭವಿ ವಿನ್ಯಾಸಗಾರರ ತಂಡವೇ ಮನೆಯನ್ನು ವಿನ್ಯಾಸ ಮಾಡಿಕೊಡಲಿದೆ. 9.48 ಎಕರೆಯ ವಿಶಾಲ ಪ್ರದೇಶದಲ್ಲಿ ಲೇಔಟ್ ನಿರ್ಮಾಣವಾಗಿದ್ದು 96 ನಿವೇಶನಗಳಿವೆ. ಇಡೀ ಲೇಔಟ್’ಗೆ ಕಣ್ಗಾವಲಾಗಿ ಇಡಲು ಹೈ ರೆಸೊಲ್ಯೂಷನ್ ಸಿ.ಸಿ. ಕ್ಯಾಮೆರಾ, ವಾಕಿಂಗ್ಗಾಗಿ ಇಂಟರ್’ಲಾಕ್ ಹಾಕಲಾಗಿರುವ ಫುಟ್ ಪಾತ್, ಬ್ಯಾಡ್ಮಿಂಟನ್ ಕೋರ್ಟ್, ಸುಸಜ್ಜಿತ ಅತ್ಯಾಧುನಿಕ ಜಿಮ್, ಆಧುನಿಕ ಸ್ವಿಮ್ಮಿಂಗ್ ಪೂಲ್, ಕೆಫೆ, ಮಿನಿ ಸೂಪರ್ ಮಾರ್ಕೆಟ್, ಮಕ್ಕಳಿಗಾಗಿ ಆಟದ ಮೈದಾನ… ಹೀಗೆ ಹತ್ತು ಹಲವು ವಿಶೇಷತೆಗಳಿಂದ ಕೂಡಿದ ಸರ್ವ ಸುಸಜ್ಜಿತ ವಸತಿ ಬಡಾವಣೆ ಇದೇ ಮೊದಲ ಬಾರಿಗೆ ನೀರುಮಾರ್ಗದಲ್ಲಿ ನಿರ್ಮಾಣಗೊಂಡಿದೆ.

ಇಡೀ ಬಡಾವಣೆಯ ರಸ್ತೆಗಳ ಉದ್ದಕ್ಕೂ ಹಸಿರೀಕರಣಕ್ಕೆ ವಿಶೇಷ ಒತ್ತು ನೀಡಲಾಗಿದೆ. ಖಾಲಿ ಜಾಗ ಇರುವ ಎಲ್ಲಾ ಕಡೆಗಳಲ್ಲಿ ಹಣ್ಣುಗಳ ಮತ್ತು ಇತರ ಗಿಡಗಳನ್ನು ನೆಡಲಾಗಿದೆ. ಬಡಾವಣೆಯು ಎತ್ತರ ಪ್ರದೇಶದಲ್ಲಿ ಇರುವುದರಿಂದ ಸಮುದ್ರ ಕಿನಾರೆಯಲ್ಲಿ ಸಿಗುವಂತಹ ಅಹ್ಲಾದಕರ ವಾತಾವರಣ, ಸ್ವಚ್ಛಂದ ಗಾಳಿ, ಬೆಳಕು, ವಾಸ್ತು ಖರೀದಿದಾರರಿಗೆ ಹೇಳಿ ಮಾಡಿಸಿದಂತಿದೆ.

ಎಲ್ಲಿದೆ ರೋಹನ್ ಎಸ್ಟೇಟ್ ?

ಮಂಗಳೂರು ಸಮೀಪದ ನೀರುಮಾರ್ಗ ಜಂಕ್ಷನ್ ನಿಂದ ಕೇವಲ 200 ಮೀಟರ್ ದೂರದ ಸ್ವಚ್ಛಂದ ಪರಿಸರದಲ್ಲಿ ರೋಹನ್ ಎಸ್ಟೇಟ್ ನಿರ್ಮಾಣವಾಗಿದೆ. ಮಂಗಳೂರು-ಮೂಡುಬಿದಿರೆ ಹೆದ್ದಾರಿಯಿಂದ 2 ಕಿಮೀ., ಕೇಂಬ್ರಿಜ್ ಸ್ಕೂಲ್ ನೀರುಮಾರ್ಗದಿಂದ 1.7 ಕಿಮೀ, ಮಂಗಳೂರು ಜಂಕ್ಷನ್ ರೈಲ್ವೆ ಸ್ಟೇಷನ್’ನಿಂದ 8.3 ಕಿಮೀ ದೂರದಲ್ಲಿದ್ದು, ಇವೆಲ್ಲದಕ್ಕೂ ರೋಹನ್ ಎಸ್ಟೇಟ್ನಿಂದ ಉತ್ತಮ ಸಂಪರ್ಕ ವ್ಯವಸ್ಥೆ ಇದೆ.

ವಿಶೇಷತೆಗಳು : 

• ಸುಸಜ್ಜಿತ ಕ್ಲಬ್ ಹೌಸ್
• 96 ನಿವೇಶನಗಳು
• 30 ಮತ್ತು 40 ಅಡಿ ಅಗಲದ ಕಾಂಕ್ರೀಟ್ ರಸ್ತೆಗಳು
• ಬೀದಿ ದೀಪಗಳು
• ಭೂಗತ ವಿದ್ಯುತ್ ಕೇಬಲ್‌ಗಳು
• ಸುಂದರ ಉದ್ಯಾನ
• ಮಳೆನೀರು ಕೊಯ್ಲು, ನೀರು ಸಂಸ್ಕರಣ ಘಟಕ
• 24×7 ಸಿಸಿಟಿವಿ ಕಣ್ಗಾವಲಿನೊಂದಿಗೆ ಭದ್ರತಾ ವ್ಯವಸ್ಥೆ
• ಮಿನಿ ಸೂಪರ್ ಮಾರ್ಕೆಟ್
• ಅತ್ಯಾಧುನಿಕ ಈಜುಕೊಳ
• ಸುಸಜ್ಜಿತ ಅತ್ಯಾಧುನಿಕ ಜಿಮ್
• ಮಕ್ಕಳ ಆಟದ ಮೈದಾನ
• ಆಧುನಿಕ ಕೆಫೆ
• ಸ್ವಿಮ್ಮಿಂಗ್ ಪೂಲ್
• ಮಕ್ಕಳ ಆಟದ ವಲಯ
• ಶಾಪಿಂಗ್ ಮಾಡಲು ಮಿನಿ ಸೂಪರ್ ಮಾರ್ಕೆಟ್
• ಯೋಗ, ಧ್ಯಾನ, ಗೆಟ್-ಟುಗೆದರ್ ಪಾರ್ಟಿ ಹಾಗೂ ಇನ್ನಿತರ ಚಟುವಟಿಕೆಗಳಿಗೆ ವಿಶಾಲವಾದ ಜಾಗ.
• ವಾಕಿಂಗ್’ಗೆ ಪ್ರಶಸ್ತವಾದ ವಿಶಾಲವಾದ ಫೂಟ್ ಪಾತ್ ಗಳು.

ನಿಮ್ಮ ಕನಸಿನ ಮನೆಗೆ ನಿಮ್ಮ ಪಾಲುದಾರ ರೋಹನ್ ಕಾರ್ಪೊರೇಷನ್‌

ಪ್ರವೃತ್ತಿಯಿಂದ ಭಿನ್ನವಾಗಿ ನಿಲ್ಲಲು ವಿಶೇಷ ನಾಯಕತ್ವ ಮತ್ತು ಮುಂದಾಲೋಚನೆಗಳು ಅಗತ್ಯ. ರೋಹನ್ ಕಾರ್ಪೊರೇಷನ್ ಸುಮಾರು 30 ವರ್ಷಗಳಿಂದ ನಿರ್ಮಾಣ ಕ್ಷೇತ್ರದಲ್ಲಿ ಭಿನ್ನತೆ ಎಂಬುದಕ್ಕೆ ಪರ್ಯಾಯ ಪದ ಎಂದು ಸಾಬೀತು ಪಡಿಸಿದ ಸಂಸ್ಥೆ . ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಮಂಗಳೂರಿಗೆ ದೊಡ್ಡ ಹೆಸರನ್ನು ತಂದುಕೊಟ್ಟ ರೋಹನ್ ಕಾರ್ಪೊರೇಷನ್ ಪ್ರಸ್ತುತ ರಾಜ್ಯದಲ್ಲಿಯೇ ಪ್ರತಿಷ್ಠಿತ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಮಂಗಳೂರಿನ ಉದಯೋನ್ಮುಖ ಉದ್ಯಮಿ ರೋಹನ್ ಮೊಂತೇರೊ ಅವರ ಕನಸಿನ ಕೂಸಾಗಿ ಆರಂಭಗೊಂಡ ಪ್ರಾಪರ್ಟಿ ರಿಯಲ್ ಎಸ್ಟೇಟ್ ಮತ್ತು ಡೆವೆಲಪರ್ಸ್ ಸಂಸ್ಥೆ ಇಂದು ರೋಹನ್ ಕಾರ್ಪೊರೇಷನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪೆನಿಯಾಗಿ ರೂಪುಗೊಂಡಿದೆ. ರೋಹನ್ ಮೊಂತೇರೊ ಕಳೆದ 30 ವರ್ಷಗಳಿಂದ ಶ್ರೇಷ್ಠ ತಂತ್ರಜ್ಞಾನ, ಸೌಲಭ್ಯಗಳನ್ನು ಮಂಗಳೂರಿಗೆ ಪರಿಚಯಿಸುವ ಮೂಲಕ ಹೊಸ ಇತಿಹಾಸವನ್ನು ಬರೆದಿದ್ದಾರೆ. ಗುಣಮಟ್ಟದ ವಸತಿ ಸಮುಚ್ಚಯಗಳು, ವಾಣಿಜ್ಯ ಕಟ್ಟಡಗಳು ಹಾಗೂ ಲೇಔಟ್‌ಗಳ ನಿರ್ಮಾಣಕ್ಕೆ ಹೆಸರಾಗಿರುವ ರೋಹನ್ ಕಾರ್ಪೊರೇಷನ್, ಮಂಗಳೂರು ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ವ್ಯವಸ್ಥೆಗಳನ್ನು ಕಲ್ಪಿಸಿಕೊಡುತ್ತಿದೆ. ತನ್ನ ಸಂಸ್ಥೆಯ ಅಡಿಯಲ್ಲಿ ನಿರ್ಮಾಣವಾಗುವ ಎಲ್ಲಾ ಸಮುಚ್ಛಯಗಳಲ್ಲಿ ರೋಹನ್ ಮೊಂತೇರೊ ಹೊಸ ಪ್ರಯೋಗವನ್ನು ನಡೆಸಿ ಯಶಸ್ವಿಯಾಗಿದ್ದು ಇಲ್ಲಿ ಗ್ರಾಹಕರ ಅಭಿಪ್ರಾಯಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಇವರ ಯಶಸ್ಸಿನ ಮೆಟ್ಟಿಲು.

Support Kittall

Kittall has been a free portal in konkani, publishing non-stop since 2011.
Kittall publishes poetry, fiction and prose from veteran and youth writers.
Kittall also posts news and news analysis in Konkani, Kannada and English.
Alternative media needs readers support.
Kittall counts on your support in its endeavour of preserving  konkani literature for the generations to come. 

 

Leave a Comment

© All Right Reserved. Kittall Publications. 

-
00:00
00:00
Update Required Flash plugin
-
00:00
00:00