ECIPH ಗೆ ಭಾರತ ಸರ್ಕಾರದ ಅಧೀನ ಕಾರ್ಯದರ್ಶಿಗಳ ಭೇಟಿ

ಕರ್ನಾಟಕದ ಮಂಗಳೂರಿನಲ್ಲಿರುವ UNECOSOC ವಿಶೇಷ ಸಮಾಲೋಚನಾ ಸ್ಥಾನಮಾನವನ್ನು ಹೊಂದಿರುವ ಅಊಆ ಗ್ರೂಪ್‌ನ ಘಟಕವಾದ ಎಡ್ವರ್ಡ್ ಮತ್ತು ಸಿಂಥಿಯಾ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ (ECIPH) ನಲ್ಲಿ ವಿವಿಧ ಕೇಂದ್ರ ಸಚಿವಾಲಯಗಳ ಭಾರತ ಸರ್ಕಾರದ ಅಧೀನ ಕಾರ್ಯದರ್ಶಿಗಳು ಭೇಟಿಯಾದರು. ಶಿಕ್ಷಣ, ಆರೋಗ್ಯ, ಹಣಕಾಸು, ರಕ್ಷಣಾ, ಗ್ರಾಮೀಣಾಭಿವೃದ್ಧಿ, ಡಿಒಪಿಟಿ, ಕ್ಯಾಬಿನೆಟ್ ಸೆಕ್ರೆಟರಿಯೇಟ್, ಸ್ಟೀಲ್, ಸಿಬಿಐ, ಪಶುಸಂಗೋಪನೆ, ಕೃಷಿ, ಪರಿಸರ ಮತ್ತು ಭೂ ವಿಜ್ಞಾನ, ರಿಜಿಸ್ಟ್ರಾರ್ ಜನರಲ್, ಪ್ರವಾಸೋದ್ಯಮ, ಕಾರ್ಪೊರೇಟ್ ವ್ಯವಹಾರಗಳು, ವಸತಿ, ಮಾಹಿತಿ ಮತ್ತು ಪ್ರಸಾರಕ್ಕಾಗಿ ಸಿಎಚ್‌ಡಿ ಗ್ರೂಪ್‌ನ ಇವರ ಪ್ರಯತ್ನವು ದೇಶಾದ್ಯಂತದ ಜೀವನದ ಮೇಲೆ ಹೇಗೆ ಪ್ರಭಾವ ಮತ್ತು ಪರಿಣಾಮ ಬೀರುತ್ತಿದೆ ಎಂಬುದನ್ನು ಅರ್ಥಮಾಡಿ ಸಮಗ್ರ ಸಂವಾದಕ್ಕಾಗಿ ವಿವಿಧ ಸಚಿವಾಲಯಗಳ ಸುಮಾರು 36 ಅಧೀನ ಕಾರ್ಯದರ್ಶಿಗಳು ಬಂದಿದ್ದರು.

ಎಡ್ವರ್ಡ್ ಮತ್ತು ಸಿಂಥಿಯಾ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್‌ನ ನಿರ್ದೇಶಕ ಡಾ| ಎಡ್ಮಂಡ್ ಫೆನಾಂಡಿಸ್ ಅವರು ಸಂಸ್ಥೆಯು ನಿರ್ವಹಿಸಿದ ಕೆಲಸವನ್ನು ಪರಿಚಯಿಸಿದರು ಮತ್ತು ಭಾರತದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನೀತಿ ಸುಧಾರಣೆಗಳಿಗೆ ಸಿಎಚ್‌ಡಿ ಗ್ರೂಪ್ ಹೇಗೆ ಸಹಾಯ ಮಾಡುತ್ತಿದೆ ಎಂಬುದನ್ನು ವಿವರಿಸಿದರು. ಭಾರತ ಸರ್ಕಾರವು ವಿವರಿಸಿರುವ ಹಂಚಿಕೆಯ ಗುರಿಗಳು ಮತ್ತು ದೃಷ್ಟಿಕೋನಗಳನ್ನು ಸಾಧಿಸುವಲ್ಲಿ ಸಚಿವಾಲಯಗಳ ಏಕೀಕರಣದೊಂದಿಗೆ ಅಪಾಯದ ಮಾಹಿತಿಯ ಯೋಜನೆಯನ್ನು ರಚಿಸುವ ಅಗತ್ಯವಿರುವ ವಿವಿಧ ವಿಧಾನಗಳನ್ನು ಡಾ ಎಡ್ಮಂಡ್ ಸೂಚಿಸಿದರು. ಉಪಕಾರ್ಯದರ್ಶಿಗಳ ಸಭೆಯಲ್ಲಿ ಸಿಎಚ್‌ಡಿ ಗ್ರೂಪ್‌ನ ಕೆಲಸದ ಆರ್ಥಿಕ ಮತ್ತು ಸಾಮಾಜಿಕ ಪ್ರಭಾವವನ್ನು ವಿವರಿಸಲಾಯಿತು. ಸಿಎಚ್‌ಡಿ ಗ್ರೂಪ್‌ನ ಅಖಿಲ ಭಾರತದಲ್ಲಿ ಜರುಗುವ ಕಾರ್ಯಗಳು 2.9 ಮಿಲಿಯನ್ ಜನರ ಮೇಲೆ ಪರಿಣಾಮ ಬೀರಿದೆ.

ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಮಾದರಿಗಳನ್ನು ಯಾವ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳಬಹುದು ಮತ್ತು ಸರ್ಕಾರಿ-ಅಭಿವೃದ್ಧಿ ವಲಯದ ಸಹಭಾಗಿತ್ವವನ್ನು ಹೇಗೆ ಮತ್ತೆ ಬಲಪಡಿಸಬಹುದು ಎಂಬುದರ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ನಿಶಾಂತ್ ಶೆಟ್ಟಿ, ಕಾರ್ಯನಿರ್ವಹಣಾ ಮುಖ್ಯಸ್ಥರು, ಸಿಎಚ್‌ಡಿ ಗ್ರೂಪ್ ಇವರು ಭಾರತ ಸರ್ಕಾರದೊಂದಿಗೆ ಕಾರ್ಯಕ್ರಮವನ್ನು ಸುಗಮಗೊಳಿಸಿದರು.

Support Kittall

Kittall has been a free portal in konkani, publishing non-stop since 2011.
Kittall publishes poetry, fiction and prose from veteran and youth writers.
Kittall also posts news and news analysis in Konkani, Kannada and English.
Alternative media needs readers support.
Kittall counts on your support in its endeavour of preserving  konkani literature for the generations to come. 

 

Leave a Comment

© All Right Reserved. Kittall Publications. 

-
00:00
00:00
Update Required Flash plugin
-
00:00
00:00