ಅನಿವಾಸಿ ಕನ್ನಡಿಗರಿಗೆ ಸಚಿವಾಲಯದ ಅಗತ್ಯವಿದೆ : ಡಾ| ಆರತಿ ಕೃಷ್ಣ

ಟೀಮ್ ಮಂಗ್ಳೂರಿಯನ್ (ಮುಂಬಯಿ) ಆಯೋಜಿತ ಅಭಿನಂದನಾ ಗೌರವ

ನಿವಾಸಿ (ಹೊರನಾಡ) ಕನ್ನಡಿಗರೆಲ್ಲರೂ ಕರುನಾಡ ಆಸ್ತಿಯಾಗಿದ್ದು ಕರ್ನಾಟಕದ ಏಳಿಗೆಯ ವರವಾಗಿದ್ದಾರೆ. ಕರುನಾಡ ಒಳನಾಡಿಗೆ ಅನಿವಾಸಿ ಭಾರತೀಯರು, ಮುಂಬಯಿಗರು ಬೇಕಾದಷ್ಟು ಕೊಡುಗೆ ನೀಡಿದ್ದಾರೆ. ಆದ್ದರಿಂದ ಹೊರನಾಡ ಕನ್ನಡಿಗರ ವಿಕಾಸವೇ ನನ್ನ ಆದ್ಯತೆಯಾಗಿದೆ. ಇಂತಹ ಅನಿವಾಸಿ ಕನ್ನಡಿಗರಿಗೆ ಸಚಿವಾಲಯದ ಅಗತ್ಯವಿದ್ದು, ಈ ಬಗ್ಗೆ ಹಾಗೂ ಹೊರದೇಶದಿಂದ ಕರುನಾಡಿಗೆ ಮರಳುವವರಿಗೆ ಉದ್ಯೋಗ ಕಲ್ಪಿಸುವ ಬಗ್ಗೆ ಸರಕಾರವು ಯೋಜನೆ ಕೈಗೊಳ್ಳುವ ಅಗತ್ಯವಿದೆ. ಇದನ್ನು ಪ್ರಣಾಳಿಕೆಯಲ್ಲಿ ಸೇರಿಸುವ ಪ್ರಯತ್ನ ನಡೆಯುತ್ತಿದೆ ಎಂದು ಅನಿವಾಸಿ ಭಾರತೀಯ ಸಮಿತಿ (ಎನ್‌ಆರ್‌ಐ ಫೋರಂ ಕರ್ನಾಟಕ) ಇದರ ಉಪಾಧ್ಯಕ್ಷೆ ಡಾ| ಆರತಿ ಕೃಷ್ಣ ತಿಳಿಸಿದರು.

ಇಂದಿಲ್ಲಿ ಮಂಗಳವಾರ ಸಂಜೆ ಅಂಧೇರಿ ಪೂರ್ವದ ಸಾಲೀಟರಿ ಕಾರ್ಪೋರೆಟ್ ಪಾರ್ಕ್‌ಇದರ ಕ್ಲಬ್ ಹೌಸ್‌ನ ಸಭಾಗೃಹದಲ್ಲಿ ಟೀಮ್ ಮಂಗ್ಳೂರಿಯನ್ (ಮುಂಬಯಿ) ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅಭಿನಂದನಾ ಗೌರವ ಸ್ವೀಕರಿಸಿ ಡಾ| ಆರತಿ ಕೃಷ್ಣ ಮಾತನಾಡಿದರು.

ಎಂಆರ್‌ಸಿಸಿ ಹಿರಿಯ ಉಪಾಧ್ಯಕ್ಷೆ ಜಾನೆಟ್ ಎಲ್.ಡಿ’ಸೋಜಾ ಅಧ್ಯಕ್ಷತೆಯಲ್ಲಿ ಜರುಗಿದ ಸರಳ ಕಾರ್ಯಕ್ರಮ ದಲ್ಲಿ ಕರ್ನಾಟಕದ ಸರ್ಕಾರದ ಮಾಜಿ ಸಚಿವ ಬಿ.ರಮಾನಾಥ ರೈ ಮುಖ್ಯ ಅತಿಥಿಯಾಗಿದ್ದು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಅತಿಥಿಗಳು ಶಾಲು ಹೊದಿಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಡಾ| ಆರತಿ ಕೃಷ್ಣ ಅವರಿಗೆ ಅಭಿನಂದನಾ ಗೌರವ ಸಲ್ಲಿಸಿ ಶುಭಾರೈಸಿದರು.

ಗೌರವ ಅತಿಥಿಗಳಾಗಿ ಬಂಟ್ವಾಳ ನಗರಾಭಿವೃದ್ಧಿ ಪ್ರಾದಿಕಾರದ ಮಾಜಿ ಅಧ್ಯಕ್ಷ ಪಿಯೂಸ್ ಎಲ್.ರೋಡ್ರಿಗಸ್, ಫೆರ್ನಾಂಡಿಸ್ ಸಮೂಹದ ಕಾರ್ಯಾಧ್ಯಕ್ಷ ವಿಲ್ಸನ್ ಫೆರ್ನಾಂಡಿಸ್, ಮಾಜಿ ನಗರ ಸೇವಕ ಕ್ಲೈವ್ ಡಯಾಸ್ ಬಾರ್ಕೂರು, ಡೈಮೆನ್ಶನ್ (ಗ್ಲೋಬಲ್ ಕ್ರಿಶ್ಚಿಯನ್ ಚೇಂಬರ್ ಆಫ್ ಕಾಮರ್ಸ್) ಕಾರ್ಯಾಧ್ಯಕ್ಷ ಸಿಲ್ವೆಸ್ಟರ್ ರೋಡ್ರಿಗಸ್, ಲೋಬೋ ಫೌಂಡೇಶನ್ (ಥಾಣೆ) ಇದರ ಅಧ್ಯಕ್ಷ ಜಾನ್ ವಿಲ್ಸನ್ ಲೋಬೋ, ಎಜೆಸ್ ಸಮೂಹ ಸಂಸ್ಥೆಯ ಕಾರ್ಯಾಧ್ಯಕ್ಷ ಆಲ್ವಿನ್ ಸಿಕ್ವೇರಾ ಗರ್ಗಾಡಿ (ಓರ‍್ಲೆಮ್) ವೇದಿಕೆಯನ್ನು ಅಲಂಕರಿಸಿದ್ದರು.

ರಮಾನಾಥ ರೈ ಮಾತನಾಡಿ ಡಾ| ಆರತಿಕೃಷ್ಣ ಅವರ ತಂದೆಯವರು ನನ್ನ ಪರಿಚಿತರೂ ಹತ್ತಿರದ ಸಂಪರ್ಕವುಳ್ಳವಾಗಿದ್ದರು. ಅನಿವಾಸಿ ಭಾರತೀಯರ ಯೋಗ ಕ್ಷೇಮಗಳ ಸ್ಪಂದನೆಗೆ ಅರ್ಹ ವ್ಯಕ್ತಿ ಆರತಿ ಕೃಷ್ಣ. ದಕ್ಷ ನಾಯಕತ್ವಕ್ಕೆ ಹೆಸರಾದ ವ್ಯಕ್ತಿತ್ವ ಇವರದ್ದಾಗಿದ್ದು, ಸಮಸ್ಯೆಗಳಿಗೆ ನೇರವಾಗಿ ಸ್ಪಂದಿಸುವದಿಟ್ಟ ಮಹಿಳೆಯಾಗಿದ್ದಾರೆ ಎಂದರು.

ಮುಂಬಯಿಗರು ಒಳ್ಳೆಯ ಉದ್ದೇಶವುಳ್ಳ ಸಹೃದಯಿಗಳಾಗಿದ್ದು, ಇಲ್ಲಿನ ಕರುನಾಡ ಜನತೆ, ನಮ್ಮೂರವರೆಲ್ಲರೂ ಒಂದಲ್ಲ ಒಂದು ರೀತಿಯ ಸಾಧಕರಾಗಿದ್ದಾರೆ. ತಮ್ಮೆಲ್ಲರ ಶ್ರಮವು ಪ್ರೀತಿ ವಿಶ್ವಾಸದ ಒಗ್ಗಟ್ಟಿನ ಶಕ್ತಿಯಾಗಿದೆ. ದ್ದಾರೆ ಎಂದ ಪಿಯೂಸ್ ರೋಡ್ರಿಗಸ್ ತಿಳಿಸಿದರು.

ವಿಲ್ಸನ್ ಫೆರ್ನಾಂಡಿಸ್ ಮಾತನಾಡಿ ಅನಿವಾಸಿ ಭಾರತೀಯರಲ್ಲಿನ ಕನ್ನಡಿಗರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ವಿಶೇಷವಾಗಿ ಗಲ್ಫ್ ಯಾ ಅಂತರಾಷ್ಟ್ರಗಳಲ್ಲಿನ ನಮ್ಮೂರ ಜನತೆಗೆ ನಕಲಿ ಏಜೆಂಟರ ತೊಂದರೆಗೆ ಒಳಪಡುತ್ತಿದ್ದಾರೆ. ಇವೆಲ್ಲವುಗಳಿಗೆ ಪರಿಹಾರದ ಅಗತ್ಯವಿದೆ ಎಂದರು.

ಡಾ| ಆರತಿ ಕೃಷ್ಣ ಅವರನ್ನು ಅಭಿನಂದಿಸುವುದು ನಮಗೆ ಸಿಕ್ಕ ಭಾಗ್ಯ. ಅವರ ಅಸಾಧರಣ ಸೇವಾ ಕೆಲಸಗಳನ್ನು ಗುರುತಿಸಿ ಸರ್ಕಾರವು ಅವರಿಗೆ ಪ್ರತಿಷ್ಠಿತ ಹುದ್ದೆಯನ್ನು ನೀಡಿದೆ. ಭಾಷೆಯಿಂದ ಪ್ರೀತಿ, ವಿಶ್ವಾಸದ ಸಂಬಂಧಗಳು ಬೆಳೆಯುತ್ತವೆ ಅನ್ನೋದಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಗಿದೆ. ನಮ್ಮ ಮಕ್ಕಳು ಜಗತ್ತಿನದಾದ್ಯಂತ ನೆಲೆಯಾಗಿದ್ದು, ಅವರಿಗೆ ಕಷ್ಟ ಕಾಲದಲ್ಲಿ ಇಂತಹ ಪ್ರಭಾವಿ ವ್ಯಕ್ತಿಗಳ ಸಂಬಂಧಗಳು ಸಮಯೋಚಿತವಾಗಿ ಕೆಲಸಕ್ಕೆ ಬರುತ್ತವೆ. ಡಾ| ಆರತಿ ಅವರಿಗೆ ಇನ್ನಷ್ಟು ಹುದ್ದೆಗಳು ಪ್ರಾಪ್ತಿಯಾಗಲಿ ಎಂದು ಅಧ್ಯಕ್ಷೀಯ ಭಾಷಣದಲ್ಲಿ ಜಾನೆಟ್ ಡಿ’ಸೋಜಾ ಶುಭಾರೈಸಿದರು.

ಕಾರ್ಯಕ್ರಮದಲ್ಲಿ ಬೋನಿಫಸ್ ಸಿಕ್ವೇರಾ ಬಾರ್ಕೂರು, ಅರ್ಥರ್ ಮೆಂಡೋನ್ಸಾ, ರಾಲ್ಫ್ ಪಿರೇರಾ, ರೆಕ್ಸ್ ಫೆರ್ನಾಂಡಿಸ್, ಅನಿಲ್ ಡಿಸೋಜಾ ಅಂಬೋಲಿ, ಎವರೆಸ್ಟ್ ಪಾಯ್ಸ್, ಎವುಜಿನ್ ಡಿಸೋಜಾ ಮರೋಲ್, ವಿನ್ಸೆಂಟ್ ಫೆರ್ನಾಂಡಿಸ್ ಸರಪಾಡಿ, ಲಾರೇನ್ಸ್ ಡಿಸೋಜಾ ಮುಲುಂಡ್, ವಿಫುಲ್ ರೋಡ್ರಿಗಸ್, ಸೂರಜ್ ರೋಡ್ರಿಗಸ್, ಐವರ್ ಸಿಕ್ವೇರಾ ಸಹಾರ್ ಸೇರಿದಂತೆ ಸದಸ್ಯರನೇಕರು ಹಾಜರಿದ್ದರು.

ಟೆಲ್ಮಾ ಜೇಮ್ಸ್ ಡೆಸಾ ಮತ್ತು ಲೀನಾ ಲಸ್ರಾದೋ ಪ್ರಾರ್ಥನೆಯನ್ನಾಡಿದರು. ರೋನ್ಸ್ ಬಂಟ್ವಾಳ್ ಪ್ರಾಸ್ತವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಲಿಯೋ ಫೆರ್ನಾಂಡಿಸ್ ಜೆರಿಮೆರಿ, ರೇಶ್ಮಾ ಅನಿಲ್ ಡಿಅಲ್ಮೇಡಾ, ರೀಮಾ ವಿನ್ಸೆಂಟ್ ರಸ್ಕೀನ್ಹಾ, ಸಿ| ಜೊಲಿನ್ ಆರ್.ಎಸ್, ವಿಲಿಯಂ ಡಿಸೋಜಾ ವಕೋಲಾ, ವಿನ್ಸೆಂಟ್ ಕಾಸ್ತೇಲಿನೋ, ಜ್ಯೂಲಿಯೆಟ್ ಪಿರೇರಾ, ಮೆರ್ಸಿನ್ ಮಿರಾಂದ ಅತಿಥಿಗಳನ್ನು ಪರಿಚಯಿಸಿದರು. ವಾಲ್ಟರ್ ಡಿಸೋಜಾ ಜೆರಿಮೆರಿ, ರೆಜಿನಾಲ್ಡ್ ಸಾಂತುಮಾಯೆರ್, ಕ್ಲೋಡಿ ಮೊಂತೇರೋ ಮೊಡಂಕಾಪು, ಪೀಟರ್ ಡಿಸೋಜಾ ಸಯಾನ್, ಡಯಾನ್ ಡಿಸೋಜಾ ವಿರಾರ್ ಜೇಮ್ಸ್ ಡೆಸಾ ಪೆರಂಪಳ್ಳಿ, ಫ್ರಾನ್ಸಿಸ್ ಫೆರ್ನಾಂಡಿಸ್ ಕಾಸ್ಸಿಯಾ, ಫ್ರಾನ್ಸಿಸ್ ಕಾಸ್ತೇಲಿನೋ ಮಹಾಕಾಳಿ, ಐವಾನ್ ಆನಂದ್ ಡಿಸೋಜಾ ನಕ್ರೆ ಅತಿಥಿಗಳಿಗೆ ಪುಷ್ಫಗುಚ್ಛ ನೀಡಿ ಗೌರವಿಸಿದರು. ಮಾ| ವಾಲ್ಲೆಸ್ ವಿಲ್ಸನ್ ಫೆರ್ನಾಂಡಿಸ್ ಅವರು ಡಾ| ಆರತಿ ಕೃಷ್ಣ ಅವರನ್ನು ಪರಿಚಯಿಸಿ ಅಭಿನಂದನಾ ನುಡಿಗಳನ್ನಾಡಿದರು. ಫ್ಲೋರಾ ಡಿಸೋಜಾ ಕಲ್ಮಾಡಿ (ಜೆರಿಮೆರಿ) ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಸಮಾಪ್ತಿ ಕಂಡಿತು.

Support Kittall

Kittall has been a free portal in konkani, publishing non-stop since 2011.
Kittall publishes poetry, fiction and prose from veteran and youth writers.
Kittall also posts news and news analysis in Konkani, Kannada and English.
Alternative media needs readers support.
Kittall counts on your support in its endeavour of preserving  konkani literature for the generations to come. 

 

Leave a Comment

© All Right Reserved. Kittall Publications. Editor : H M Pernal