ಕನ್ಯಾ ಮಾತೆ ದೇವಾಲಯ ಬಜ್ಜೋಡಿ ಮಂಗಳೂರು ಇಲ್ಲಿ ಹಿರಿಯರ ದಿನಾಚರಣೆ ನಡೆಯಿತು. ವಂದನೀಯ ಧರ್ಮಗುರು ಡೊಮಿನಿಕ್ ವಾಸ್ ಬಲಿಪೂಜೆ ಯನ್ನು ಅರ್ಪಿಸಿ ಪ್ರಬೋಧನೆ ನೀಡಿದರು. ನಂತರ ನಡೆದ ಸಭಾ ಕಾರ್ಯಕ್ರಮ ದ ಅಧ್ಯಕ್ಷಯನ್ನು ವಹಿಸಿ ಹಿರಿಯ ರಿಗೆ ಕೆಲವು ಸಲಹೆ ಗಳನ್ನು ನೀಡಿದರು. ಮುಖ್ಯ ಅತಿಥಿ ಗಳಾಗಿ ಶ್ರೀಮತಿ ತನ್ವಿರ್ ಷಾ ( ಮಂಗಳೂರು ನಗರ ಪಾಲಿಕೆ ಸದಸ್ಯರು) ಆಗಮಿಸಿದ್ದರು.
“ನಾವೂ ಹಿರಿಯರ ಜೊತೆ ಯಾವಾಗಲು ನಗು ನಗುತ್ತಾ ಇರಬೇಕು ಅವರ ಪಾಲನೆ ಮಾಡಿ ಅವರೊಂದಿಗೆ ಬೆರೆತರೆ ನಮ್ಮ ಕುಟುಂಬ ಗಳು ಉತ್ತಮ ರೀತಿ ಯಲ್ಲಿ ಜೀವನ ನಡೆಸಲು ಸಾಧ್ಯ” ಎಂದು ನುಡಿದರು.
ಹಿರಿಯರಿಗೆ ವಿವಿಧ ಸ್ಪರ್ಧೆ ಮತ್ತು ಮನೋರಂಜನೆ ಗಳನ್ನು ಏರ್ಪಡಿಸಲಾಯಿತು. ವಂದನೀಯ ಧರ್ಮಗುರು ಸಿರಿಲ್ ಮಿನೆಜಸ್ ಧರ್ಮಗುರು ಪ್ರಣಾಮ್ ಫೆರ್ನಾಂಡಿಸ್ ಪಾಲನಾ ಮಂಡಳಿ ಸದಸ್ಯರು ಮತ್ತು ಕುಟುಂಬ ಆಯೋಗ ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಸಹಕಾರದಿಂದ ಕಾರ್ಯಕ್ರಮ ನಡೆಯಿತು. ಶ್ರೀಮತಿ ರಿಕಿತ ಫಾಯ್ಸ್ ಕಾರ್ಯಕ್ರಮ ನಿರೂಪಿಸಿದರು