ಕ್ರೈಸ್ತ ವಿದ್ಯಾಪೀಠ, ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಜೆಪ್ಪು ಸಂತ ಜೋಸೆಫ್ ತತ್ತ್ವಶಾಸ್ತ್ರದ ಸಂಸ್ಥೆಯ ಇಂಗ್ಲೀಷ್ ಅಕಾಡೆಮಿಯ ಸಹಯೋಗದಲ್ಲಿ ಜನವರಿಯ 30 ರಂದು ಸಂತ ಜೋಸೆಫರ ಸೆಮಿನರಿಯಲ್ಲಿ ಆಹಾರವು ಲಸಿಕೆ ಎಂಬ ವಿಷಯದ ಮೇಲೆ ಉಪನ್ಯಾಸ ಜರಗಿತು. ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಡಾ. ಶ್ರೀನಿವಾಸ ಕಕ್ಕಿಲ್ಲಾಯರವರು ನಮ್ಮ ಆಹಾರ ಪದ್ಧತಿಯ ಕುರಿತು ಉಪಯುಕ್ತ ಮಾಹಿತಿಯನ್ನು ನೀಡಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಡಾ। ಕಕ್ಕಿಲ್ಲಾಯ “ಆಹಾರವು ವ್ಯಾಪಾರ, ರಾಜಕೀಯ, ಶರೀರದ ಪೋಷಣೆ ಎಲ್ಲವೂ ಆಗಿದೆ. ಇಂದಿನ ಆಹಾರವು ಆಧುನಿಕತೆಯ ರೋಗಗಳಿಗೆ ಕಾರಣವಾಗಿದೆ. ನಾವು ಸಕ್ಕರೆಯ ಚಟಕ್ಕೆ ಬಲಿಯಾದ ಸಮಾಜವಾಗಿದ್ದೇವೆ. ನಾವು ಸಕ್ಕರೆ ಮಿಶ್ರಿತ ತಿಂಡಿ-ತಿನಿಸುಗಳು, ಹಾಲು ಮತ್ತದರ ಉತ್ಪನ್ನಗಳು, ಹಣ್ಣು-ಹಂಪಲುಗಳು, ಸಂಸ್ಕರಿಸಿದ ಧಾನ್ಯಗಳು ಮತ್ತು ಎಣ್ಣೆಯಲ್ಲಿ ಅತಿಯಾಗಿ ಕರಿದ ಆಹಾರಗಳ ಸೇವನೆಯನ್ನು ನಿಲ್ಲಿಸಬೇಕು. ನಾವು ಮೀನು, ಮಾಂಸ, ಮೊಟ್ಟೆ, ತರಕಾರಿಗಳನ್ನು ಹೆಚ್ಚು ಪ್ರಮಾಣದಲ್ಲಿ ತಿನ್ನಬೇಕು. ಇಂದು ನಮ್ಮ ಆಹಾರವನ್ನು ರಾಜಕೀಯ ಶಕ್ತಿಗಳು, ಔಷಧಿ ಕಂಪೆನಿಗಳು ಮತ್ತು ಧಾರ್ಮಿಕ ಸಿದ್ಧಾಂತಗಳು ನಿಯಂತ್ರಿಸುತ್ತಿವೆ. ನಾವು ಅದನ್ನು ಪ್ರಶ್ನಿಸುವವರಾಗಬೇಕು” ಎಂದು ಹೇಳಿದರು.
ಕಾರ್ಯಕ್ರಮವನ್ನು ಕ್ರೈಸ್ತ ವಿದ್ಯಾಪೀಠದ ಮುಖ್ಯಸ್ಥ ವಂ.ಡಾ. ಐವನ್ ಡಿಸೋಜ ಮತ್ತು ತತ್ತ್ವಶಾಸ್ತ್ರೀಯ ಇಂಗ್ಲೀಷ್ ಅಕಾಡೆಮಿಯ ಕಾರ್ಯದರ್ಶಿ ಜಕ್ಕುಲ ಜೋಶ್ವಾ ಇವರ ನಾಯಕತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು. ಮಹಾತ್ಮ ಗಾಂಧಿಯವರು ಹುತಾತ್ಮರಾದ ದಿನವನ್ನು ನೆನೆದು ಅವರ ಪ್ರೇರಣೆಯಿಂದ ಮುನ್ನಡೆಯಲು ಸಂವಿಧಾನದ ಪೀಠಿಕೆಯನ್ನು ಓದಿ ಕಾರ್ಯಕ್ರಮವನ್ನು ಕೊನೆಗೊಳಿಸಲಾಯಿತು.
ವಂ. ಡಾ. ಲಿಯೊ ಲಸ್ರಾದೊರವರು ಸಮರ್ಥವಾಗಿ ಮಧ್ಯವರ್ತಿಯ ಜವಾಬ್ದಾರಿಯನ್ನು ನೆರವೇರಿಸಿದರು. ಫ್ಲೆಕ್ಸನ್ ಲೋಬೊ ಕಾರ್ಯಕ್ರಮವನ್ನು ನಿರೂಪಿಸಿದರು.
2 comments
ಸಕ್ಕರೆ, ಉಪ್ಪು, ಹಾಲು, ಬಿಳಿ ಅನ್ನ, ಮೈದಾ ಈ ಐದು ಬಿಳಿ ವಿಷಯಗಳನ್ನು ನಾವು ದಿನನಿತ್ಯ ಸೇವಿಸಿ ನಮ್ಮ ಆರೋಗ್ಯವನ್ನು ನಾವೇ ಹಾಳು ಮಾಡುತಿದ್ದೇವೆ ಎಂದು ಹಲವಾರು ಆಯುರ್ವೇದ ವೈದ್ಯರು ಇತ್ತೀಚೆಗೆ ಜಾಗೃತಿ ನೀಡುತಿದ್ದಾರೆ.
ಡಾ ಕಕ್ಕಿಲ್ಲಾಯರು ಸಕ್ಕರೆ ಯಾವುದೇ ರೂಪದಲ್ಲಿ, ನೈಸರ್ಗಿಕ ಅಥವಾ ಸಂಸ್ಕರಿತ ಸೇವಿಸಬಾರದೆಂದು ಹೇಳಿದ್ದಾರೆ. ಬೇರೆಯವರು ಹೇಳುವುದಕ್ಕಿಂತ ಡಾ ಕಕ್ಕಿಲ್ಲಾಯ ಹೇಳುವುದರಲ್ಲಿ ಅದೇ ವ್ಯತ್ಯಾಸ. ಹಣ್ಣುಹಂಪಲಗಳನ್ನು ಸೇವಿಸಬೇಡಿ ಎಂದೇ ಹೇಳುತಿದ್ದಾರೆ. ಅವುಗಳಲ್ಲಿ ಸಕ್ಕರಾಂಶ ಅಧಿಕವಿರುವುದೇ ಕಾರಣ. ಹಣ್ಣುಗಳು ಪಕ್ಷಿಗಳ ನೈಸರ್ಗಿಕ ಆಹಾರ. ಅದೇ ರೀತಿ ಹಾಲು ಮತ್ತು ಅದರ ಉತ್ಪನ್ನಗಳು ಕೂಡ ವಯಸ್ಕರಿಗೆ ಒಳ್ಳೆಯ ಆಹಾರವಲ್ಲ. ಇದನ್ನು ಯಾವ ಆಯುರ್ವೇದ ಅಥವಾ ಇತರ ಅಲೋಪತಿ ವೈದ್ಯರು ಕೂಡ ಹೇಳುವುದಿಲ್ಲ. ಹಾಗೆ ಹೇಳಲು ತಿಳುವಳಿಕೆಯೂ ಬೇಕು, conviction ಮತ್ತು ಧೈರ್ಯವೂ ಬೇಕು. ಅದೇ ಡಾ ಕಕ್ಕಿಲ್ಲಾಯರ ವಿಶೇಷತೆ.