ಎಚ್ಚೆಮ್, ಪೆರ್ನಾಳ್

ಎಚ್ಚೆಮ್, ಪೆರ್ನಾಳ್

ಎಚ್ಚೆಮ್ ಪೆರ್ನಾಳ್ ಹ್ಯಾ ಲಿಕ್ಣೆನಾಂವಾನ್ ಕೊಂಕ್ಣಿ ಸಾಹಿತ್ಯ್ ಸಂಸಾರಾಂತ್ ಒಳ್ಕೆಚೊ ಹೆನ್ರಿ ಮೆಂಡೋನ್ಸಾ, ಗಾಂವಾನ್ ಪೆರ್ನಾಳ್ಚೊ. ಪ್ರಸ್ತುತ್ ಕೊಂಕ್ಣಿ ಸಾಹಿತ್ಯ್ ಆನಿ ಸಮಾಜೆಕ್ ಸಮರ್ಪಿತ್ ಜಾಳಿಸುವಾತ್ ಕಿಟಾಳ್ ತಶೆಂ ಆರ್ಸೊ ಪಂದ್ರಾಳೆಂ ಪತ್ರಾಚೊ ಸಂಪಾದಕ್. ಚಲ್ಯಾಂಕ್ ಚತ್ರಾಯ್(1999), ಕಯ್ದ್ಯಾಚೊ ಕವಿತಾ(2004), ಭಾಮುಣಾಂಚೆಂ ಚೆಡುಂ(2006) - ತಾಚೆ ಪ್ರಕಟಿತ್ ಕವಿತಾ ಜಮೆ. ದೆವಾಕ್ ಸೊಡ್‌ಲ್ಲೊ ಪಾಡೊ(2002), ಬೀಗ್ ಆನಿ ಬಿಗಾತ್ (2016)   - ಮಟ್ವ್ಯಾ ಕಾಣಿಯಾಂ ಸಂಗ್ರಹ್.  ಕೊಂಕ್ಣೆ ಶಿವಾಯ್ ಕನ್ನಡ್, ಇಂಗ್ಲಿಷ್ ಭಾಸಾಂನೀಯ್ ತೋ ಬರಯ್ತಾ. 

Recent Archives

ಕರ್ನಾಟಕದಲ್ಲಿ ಕೊಂಕಣಿಗೆ ಬಲವಂತದ ’ಉದ್ಯಮಸ್ನಾನ?’

ಎಚ್ಚೆಮ್, ಪೆರ್ನಾಳ್        2014-06-27 16:51:26
  |     |  ಕಾಲ್ಚ್ಯಾ ಉದಯವಾಣಿ ಪತ್ರಾರ್ ಬೆಂಗ್ಳುರ್ಚ್ಯಾ ವಸಂತ ಶೆಟ್ಟಿ ಮ್ಹಳ್ಳ್ಯಾನ್ ಆಪ್ಲ್ಯಾ ಅಂಕಣಾಂತ್ ಕೊಂಕ್ಣೆವಿಶ್ಯಾಂತ್ ವಾಸ್ತವ್ ಗಜಾಲ್ ಸಮ್ಜೊನ್ ಘೆನಾಸ್ತಾನಾ ಥೊಡ್ಯೊ ಗಜಾಲಿ ಬರಯ್ಲ್ಯಾತ್. ಹ್ಯಾ ಪತ್ರಾನ್ ಹಾಚ್ಯಾ ಅದಿಂಯೀ ಕೊಂಕ್ಣಿ ಭಾಸ್, ಸಾಹಿತ್ಯ್, ಸಂಸ್ಕೃತೆಕ್ ಲಗ್ತಿ ಜಾಯ್ತೆ ಸತ್ ನ್ಹಂಯ್ ಆಸ್ಚೆ ಗಜಾಲಿ ಫಾಯ್ಸ್ ಕೆಲ್ಯಾತ್ ಆನಿ ಚುಕಿ ಸಾರ್ಕೆಂ ಕರ್ನ್ ಹಾಂವೆ ಬರಯಿಲ್ಲಿಂ ಪತ್ರಾಂ ಘಾಲುಂಕ್ ನಾಂತ್. ಹೆಂ ಬರಪ್ ತಾಂಕಾ ಧಾಡ್ಲ್ಯಾರೀ ಫಾಯ್ಸ್ ಕರ್ತಿತ್ ಮ್ಹಳ್ಳಿ ಹಮಿದಾರಿ ಮ್ಹಾಕಾ ನಾ. ದೆಕುನ್ ಹೆಂ ಬರಪ್  ಬರಯ್ಣಾರಾಕ್ ಇ ಮೇಲಾರ್ ಧಾಡುನ್ ದಿಲಾಂ ಆನಿ ಹಾಂಗಾಸರ್ ತುಮ್ಕಾಂ ಆನಿ ಹೆರ್ ಕನ್ನಡಾಚಾ ವಾಚ್ಪ್ಯಾಂಕೀ ವಾಚುಂಕ್ ಸಲೀಸ್ ಜಾಂವ್ದಿ ಮ್ಹಳ್ಳ್ಯಾ ಇರಾದ್ಯಾನ್ ಕನ್ನಡಾಂತ್ ದಿತಾಂ.  ಕೊಂಕ್ಣಿ ಭಾಸ್ ಆನಿ ಸಾಹಿತ್ಯಾಬಾಬ್ತಿನ್ ಹೆ ಮ್ಹಜೆ ಖಾಸ್ಗಿ ವಿಚಾರ್. ತುಮ್ಚೆ ವಿಚಾರ್ ಮ್ಹಜ್ಯಾ ವಿಚಾರಾಂಕ್ ತುಮಿ ಜೊಡುಂಕ್ ವಾ ವಿರೋದ್ ಕರುಂಕ್ ಉಗ್ತ್ಯಾಮನಾಚ್ಯಾ ಚರ್ಚೆಕ್ ಅವ್ಕಾಸ್ ಆಸಾ. ಖಾಸ್ಗಿ ಆರೋಪ್ ನಾಕಾತ್. ಚರ್ಚಾ ವಿಶಯಾಚೆರ್ ಆಸೊಂ.

 

ಪ್ರಿಯ ವಸಂತ ಶೆಟ್ಟಿ,

ನಮಸ್ಕಾರಗಳು. ಈ ಉತ್ತರವನ್ನು ನಾನು ನಿಮ್ಮ ಅಂಕಣ ಪ್ರಕಟವಾದ ಪತ್ರಿಕೆಯಲ್ಲೇ ಬರೆಯಬೇಕಿತ್ತು.  ಆದರೆ ಆ ಪತ್ರಿಕೆ ನನ್ನ ಬರಹವನ್ನು ಪ್ರಕಟಿಸುತ್ತದೆಯೆಂಬ ಖಾತ್ರಿ ನನಗಿಲ್ಲವಾದುದರಿಂದ ಇಲ್ಲಿ ಬರೆಯುತ್ತಿರುವದಕ್ಕೂ ಮತ್ತು ಎಷ್ಟೋ ವರ್ಷಗಳ ನಂತರ ಕನ್ನಡ ಬರೆಯುತ್ತಿರುವ ಕಾರಣ ನನ್ನ ಕನ್ನಡ ಬರೆವಣಿಗೆಯಲ್ಲಿ ನ್ಯೂನತೆಗಳಿದ್ದರೆ ಅದ್ದಕ್ಕೂ ಕ್ಶಮೆಯಿರಲಿ. ಕಳೆದ ಸಲ ಉಜ್ವಾಡು ಎಂಬ ಕೊಂಕಣಿ ಚಿತ್ರಕ್ಕೆ ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ಬಂದಾಗ ನೀವು ಅಂಕಣ ಬರೆಯುತ್ತಿರುವ ಪತ್ರಿಕೆಯಲ್ಲಿ ಆ ಚಿತ್ರದ ನಿರ್ದೇಶಕರು ಉಜ್ವಾಡು 35 ವರ್ಷಗಳ ನಂತರ ಕೊಂಕಣಿಯಲ್ಲಿ ನಿರ್ಮಾಣವಾದ ಚಿತ್ರ ಎಂಬ ಹೇಳಿಕೆಯನ್ನು ಕೊಟ್ಟಿದ್ದರು. ಈ ಹೇಳಿಕೆ ಸತ್ಯವಲ್ಲ ಮೂರ್ನಾಲ್ಕು ವರ್ಷಗಳ ಹಿಂದೆ ಕಾಜಾರ್ ಎಂಬ ಕೊಂಕಣಿ ಚಿತ್ರ ತೆರೆಕಂಡು ಅದಕ್ಕೂ ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ಬಂದಿತ್ತು ಎಂದು ಸಂಪಾದಕರಿಗೆ ಪತ್ರ ಬರೆದಿದ್ದೆ. ಅದನ್ನು ಅವರು ಪ್ರಕಟಿಸಲಿಲ್ಲ. ಆದುದರಿಂದ ಈ ಪತ್ರ ಪ್ರಕಟಿಸುತ್ತಾರೆ ಎಂಬ ಖಾತ್ರಿ ನನಗಿಲ್ಲ. ( ಆಗ ನಿಮ್ಮಿಂದ ಅಂಕಣ ಬರೆಯಿಸಿದ ಮಂದಿ ಸುಮ್ಮನಿದ್ದರು )

ನಿಮ್ಮ ಬರಹವನ್ನು ಓದಿ ನನಗೆ ಮೊತ್ತ ಮೊದಲು ಅನಿಸಿದ್ದು - ಅಯ್ಯೋ ! ಕೊಂಕಣಿಗೆ ಈ ಸ್ಥಿತಿ ಬರಬಾರದಿತ್ತು.  ನನಗೆ ತಿಳಿದಿರುವ ಪ್ರಕಾರ ಮಾರ್ಚ್ 16 ರ ಸಮ್ಮೇಳನದಲ್ಲಿ ನೀವು  ಪ್ರಮುಖ ಭಾಷಣಕಾರರು. ಕೊಂಕಣಿಯಲ್ಲಿ ಈ ವರೆಗೆ "ನಿಮಗೆ ಪ್ರಶಸ್ತಿ ಕೊಡುತ್ತೇವೆ, ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ನೀವು ಒಂದಿಷ್ಟು ಜನ ತರುವ ಏರ್ಪಾಡು ಮಾಡಿ" ಎನ್ನುವ ಒಳಒಪ್ಪಂದಗಳು ನಡೆಯುತ್ತಿದ್ದವು ಎಂದು ಜನ ಮಾತಾಡಿಕೊಳ್ಳುತ್ತಿದ್ದರು ಇನ್ನು ಮುಂದೆ  "ನಿಮಗೆ ಭಾಷಣ ಮಾಡಲು ಅವಕಾಶ ಕೊಡುತ್ತೇವೆ. ವೇದಿಕೆ ಕೊಡುತ್ತೇನೆ. ಪತ್ರಿಕೆಗಳಲ್ಲಿ ಬರೆದು ಗುಲ್ಲೆಬ್ಬಿಸಿ ಜನ ಬರುವ ಹಾಗೆ ಮಾಡಿ ಅಥವಾ ಅಂಕಣದಲ್ಲಿ ಆಹ್ವಾನಿಸಿ" ಎನ್ನುವ ವ್ಯವಹಾರಗಳು ಕುದುರಿಕೊಳ್ಳತೊಡಗಿವೆ ಎಂದು ಮಾತಾಡತೊಡಗಿದರೆ ಆಶ್ಚರ್ಯಪಡಬೇಕಿಲ್ಲವೇನೊ.  ತನ್ನ ಸಂಪನ್ಮೂಲಗಳನ್ನು ಬಳಸಿ ಜನರನ್ನು ಒಟ್ಟುಗೂಡಿಸಲಾಗದೇ,  ಸಂಪನ್ಮೂಲ ವ್ಯಕ್ತಿಗಳಿಂದಲೇ ಪ್ರಚಾರ ಮಾಡಿಸಿ ಜನರನ್ನು ಒಟ್ಟುಗೂಡಿಸುವ ಮಟ್ಟಕ್ಕೆ ಕೊಂಕಣಿ ಸಂಘೋಟನ್‌ಗಳು ಇಳಿದದ್ದು ಮತ್ತು ನಿಮ್ಮತಂಹ ಮೇಧಾವಿಗಳು ಈ ತಂತ್ರಕ್ಕೆ ಬಲಿಪಶುವಾದದ್ದು  ಮೊದಲನೆಯ ದುರಂತವಾದರೆ, ನೀವು ಹೆಮ್ಮೆಯಿಂದ ಕನ್ನಡ ಮತ್ತು ಕರ್ನಾಟಕಕ್ಕೆ ಗಣನೀಯ ಕೊಡುಗೆ ನೀಡಿದ್ದಾರೆಂದು ತೊಡೆತಟ್ಟಿ ಹೇಳುವ ಕೊಂಕಣಿರಿಗರಲ್ಲಿ ಒಬ್ಬನೂ ಸಂಘೋಟನ್‌ನವರಿಗೆ ಭಾಷಣಕ್ಕೆ ಸಿಗದೇ, ತುಳು ಭಾಷಿಕನನ್ನು ಹುಡುಕಿ ಹೋದದ್ದು ಎರಡನೇ ದುರಂತ.  

 

ಇ ಪೇಪರ್‌ನಲ್ಲಿ ವಸಂತ ಶೆಟ್ಟಿ ಲೇಖನ ಓದಲು ಕ್ಲಿಕ್ ಮಾಡಿ 

 

ನಿಮ್ಮ,  ಕನ್ನಡ ಮತ್ತು ಕರ್ನಾಟಕದ ಬೆಳವಣಿಗೆಯಲ್ಲಿ ಕೊಂಕಣಿ ಭಾಷಿಕರ ಕೊಡುಗೆ ಗಣನೀಯವಾದದ್ದು ಎಂಬ ಅನಿಸಿಕೆ ಮೇಲ್ನೊಟಕ್ಕೆ ಸರಿಯೆಂದು ಕಂಡರೂ ತೀರಾ ಸಂಕುಚಿತವಾದದ್ದು. ಕೊಂಕಣಿ ಭಾಷಿಕರ ಕೊಡುಗೆಯನ್ನು ನೀವ್ಯಾಕೆ ಬರೇ ಕರ್ನಾಟಕ ಮತ್ತು ಕನ್ನಡಕ್ಕೆ ಮಾತ್ರ ಸೀಮಿತ ಮಾಡಬೇಕು ? ಗುಜರಾತಿನಿಂದ ಕೇರಳದವರೆಗೆ ಹಬ್ಬಿದ ಭಾಷೆಯನ್ನು ಕರ್ನಾಟಕಕ್ಕಷ್ಟೇ ಸೀಮಿತ ಮಾಡಿ ಬರೆದಿರುವ ನಿಮ್ಮ ಸಂಕುಚಿತ ಮನೋಭಾವದ ಬಗ್ಗೆ ನನಗೆ ತೀರಾ ಕನಿಕರವಿದೆ.  ನೀವು ಲೇವಡಿ ಮಾಡುತ್ತಿರುವ ಹಿಂದಿಗೆ ಕೊಂಕಣಿ ಭಾಷಿಕರ ಕೊಡುಗೆ ಏನು ಕಡಿಮೆಯೆ? ಶ್ಯಾಂ ಬೆನಗಲ್‌ರಂತಹ ಪ್ರತಿಭಾಶಾಲಿ ನಿರ್ದೇಶಕರು ಕೊಂಕಣಿ ಭಾಷಿಕರು. ಐಸಿಐಸಿಐ ಬ್ಯಾಂಕಿನ ಕೆ.ವಿ. ಕಾಮತ್ ಕೊಂಕಣಿ ಭಾಷಿಕರು. ಹಿರಿಯ ಪತ್ರಕರ್ತ ಎಮ್. ವಿ. ಕಾಮತ್ ಕೊಂಕಣಿ ಭಾಷಿಕರು. ಎನ್‌ಕಾಂವ್ಟರ್ ಸ್ಪೆಶಲಿಶ್ಟ್ ದಯಾ ನಾಯಕ್ ಕೊಂಕಣಿ ಭಾಷಿಕರು.  ಹೀಗೆ ಎಷ್ಟೋ ಉದಾಹರಣೆಗಳನ್ನು ನಾನು ಇಲ್ಲಿ ಕೊಡಬಹುದು.  ಹಿಂದಿ ಭಾಷೆಯಲ್ಲಿ ಮಿಂಚಿದ ಕೊಂಕಣಿ ಭಾಷಿಕರ ಕೊಡುಗೆ ಯಾವ ಮಟ್ಟದ್ದು ಎಂಬುದನ್ನು ಅರಿತುಕೊಳ್ಳಬೇಕಾದರೆ - ಬೇರೆ ಯಾರನ್ನೂ ಬೇಡ - ಯಾರ ಮುಂದಾಳುತ್ವದ ಸಮ್ಮೇಳನದಲ್ಲಿ ನೀವು ನಾಳೆ ಭಾಷಣ ಮಾಡಲಿರುವಿರೋ ಅವರನ್ನೇ ಒಮ್ಮೆ  ಕೇಳಿ ನೋಡಿ. ಅವರು ಶ್ಯಾಂ ಬೆನಗಲ್ ಅವರನ್ನು ಮಂಗಳೂರಿಗೆ ಕರೆಸಿ, ವೇದಿಕೆ ನೀಡಿ,  ಅವರಿಂದ ಕೊಂಕಣಿ ಏಕ್  ಖೋಜ್ ಎಂಬ ಸಿನೇಮಾವನ್ನು ಮಾಡುತ್ತಿದ್ದಾರೆ. ನೀವು ಇದನ್ನೂ ಬಲವಂತದ ಹಿಂದಿ ಹೇರಿಕೆಯೆನ್ನುತ್ತೀರಾ ?  

ಗುಜರಾತಿನಿಂದ ಕೇರಳದವರೆಗೆ ಹಬ್ಬಿದೆಯೆನ್ನುವ ಒಂದು ಭಾಷೆಯ ಸಮಗ್ರ ಅಧ್ಯಯನವನ್ನು ಮಾಡದೇ ಯಾವುದೋ ಮೊನ್ನೆ ಮೊನ್ನೆ ಹುಟ್ಟಿದ ಸಂಘೋಟನ್‌ನವರು ಹೇಳಿದರೆಂದು ಪತ್ರಿಕೆಯಲ್ಲಿ ಅಂಕಣ ಬರೆಯುವುದು ನೀವು ಅಂಕಣ ಬರಹವನ್ನು ಎಷ್ಟು ಗಂಬೀರವಾಗಿ ಪರಿಗಣಿಸಿದ್ದೀರಿ ಮತ್ತು ಬರೆಯುವ ಮುಂಚೆ ಆ ವಿಷಯದ ಬಗ್ಗೆ ನೀವೆಷ್ಟು ಮನೆಗೆಲಸ ಮಾಡುತ್ತೀರಿ ಎಂಬುದನ್ನು  ತೋರಿಸುತ್ತದೆ. ಹೇಳಿಕೆ ಕೊಡುವವರು ತಮ್ಮ ಲಾಭಕ್ಕೆ ಏನೇ ಹೇಳಿಕೆ ಕೊಡಬಹುದು, ಅದರ ಸತ್ಯಾಸತ್ಯತೆಯನ್ನು ಅರಿಯಲು ವಿಷಯದ ಎಲ್ಲಾ ಮಗ್ಗುಲುಗಳನ್ನು ಪರಾಮರ್ಶಿಸಿ ನೋಡಬೇಕಾದ್ದು ಅಂಕಣಕಾರನ ಜವಾಬ್ದಾರಿ ಎಂದು ನನ್ನ ತಿಳುವಳಿಕೆ.

ಒಂದು ಭಾಷೆ ಬರೀ ಸಾಹಿತ್ಯ ಅಕಾಡೆಮಿ ಕೊಡುವ ಪುರಸ್ಕಾರಗಳಿಂದ ಮಾತ್ರ ಬೆಳೆಯಬಲ್ಲುದು ಎಂಬುದರ ಬಗ್ಗೆ ನನಗೆ ನನ್ನದೇ ಆದ ಗುಮಾನಿಗಳಿವೆ. ಕರ್ನಾಟಕದ ಕೊಂಕಣಿ ಸಾಹಿತ್ಯಕ್ಕೆ ಹೆಚ್ಚು ಕಮ್ಮಿ ನೂರು ವರ್ಷಗಳ ಇತಿಹಾಸ. ಕೊಂಕಣಿಯ ಮೊದಲ ಪತ್ರಿಕೆ ಬಂದದ್ದು 1912. ಪುಸ್ತಕ ರೂಪದಲ್ಲಿ ಕೊಂಕಣಿ ಭಾಷೆಯಲ್ಲಿ ಪ್ರಕಟವಾದ ಸಾಹಿತ್ಯ ಮೊದಲಿನ 50 ವರ್ಷಗಳಲ್ಲಿ ವಿರಳವೆನ್ನಬಹುದು. ಆದರೆ ಇತ್ತೀಚೆಗೆ ಸಾಕಷ್ಟು ಪುಸ್ತಕಗಳು ಪ್ರಕಟವಾಗುತ್ತಿವೆ. ಕಾರ್ಯಕ್ರಮಗಳೂ ನಡೆಯುತ್ತಿವೆ.  ಇಷ್ಟು ವರ್ಷಗಳಲ್ಲಿ ಕೊಂಕಣಿ ಭಾಷೆ ಅಕಾಡೆಮಿಯ ಪುರಸ್ಕಾರಗಳಿಲ್ಲದೇ ಬೆಳೆದದ್ದು ಹೌದಾದರೆ ಈಗ ಒಮ್ಮಿಂದೊಮ್ಮೆಲೆ ಈ ಪುರಸ್ಕಾರದ ವಿಷಯ ಕೊಂಕಣಿಯಲ್ಲಿ ಯಾಕೆ ಯುದ್ದದ ವಿಷಯವಾಯಿತು ? ಒಬ್ಬ ವ್ಯಕ್ತಿ ಮತ್ತವನ  ಬಣ  ಮಾತ್ರ ಯಾಕೆ ಈ ಯುದ್ದದಲ್ಲಿದೆ ? ನನ್ನಂತಹ ಕೊಂಕಣಿ ಬರಹಗಾರರಿಗೆ ಯಾಕೆ ಇದು ನಗಣ್ಯ ವಿಷಯವಾಗಿದೆ ? ಇವತ್ತು ಹಿಂದಿಯನ್ನು ವಿರೋಧಿಸುವವರು ಈಗ್ಗೆ ಕೆಲವರ್ಷಗಳ ಹಿಂದೆ ಒಂದಲ್ಲ ಎರಡೆರಡು ಪುಸ್ತಕಗಳನ್ನು ಹಿಂದಿಯಲ್ಲಿ ಮಾತ್ರ ಯಾಕೆ ಪ್ರಕಟಿಸಿದರು? ಕೋರ್ಟಿನಲ್ಲಿ ಕೇಸು ಹಾಕಿದವರು ಕೇಸು ಹಾಕಿದ ನಂತರವೂ ತಮ್ಮ ಪುಸ್ತಕಗಳನ್ನು ಯಾಕೆ ಹಿಂದಿಯಲ್ಲಿ ಪ್ರಕಟ ಮಾಡುತ್ತಾರೆ ? ಹೇಳುವುದು ವೇದ - ಇಕ್ಕುವುದು ಗಾಳ ಯಾಕೆ ? ಯಾಕೆ ಈ ದ್ವಂದ್ವ ನೀತಿ ?  ಕನ್ನಡ ಲಿಪಿಯ ಕೊಂಕಣಿ ಸಾಹಿತ್ಯಕ್ಕೆ ಸಾಹಿತ್ಯ ಅಕಾಡೆಮಿ ಪುರಸ್ಕಾರ ಬೇಕೆನ್ನುವ ಇವರು ಈವರೆಗೆ ಏನು ಬರೆದಿದ್ದಾರೆ ? ಈ ಬಗ್ಗೆ  ಒಬ್ಬ ಜವಾಬ್ದಾರಿಯುತ ಬರಹಗಾರರಾಗಿ ನೀವು ಬರೆಯುವ ಮುನ್ನ ಮಾಹಿತಿ ಸಂಗ್ರಹಿಸಬೇಕಿತ್ತು.

ಇದು ಭಾರತದಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿರುವ ಹಿಂದಿ ಹೇರಿಕೆಯ  ಮುಂದುವರೆದ ಭಾಗವೇ ಆಗಿದೆ ಎಂದು ಕರ್ನಾಟಕದ ಮತ್ತು ಕೇರಳ ಕೊಂಕಣಿ ಭಾಷಿಕರ ಅಭಿಪ್ರಾಯ ಎಂದು ಬರೆದಿರುವ ನೀವು ಕರ್ನಾಟಕದ ಮತ್ತು ಕೇರಳದ ಎಷ್ಟು ಕೊಂಕಣಿ ಭಾಷಿಕರ ಅಭಿಪ್ರಾಯ ಸಂಗ್ರಹಿಸಿದ್ದೀರಿ ? ಕೇರಳದಲ್ಲಿ ಇರುವ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಭಿಪ್ರಾಯವನ್ನು ಪಡೆದಿದ್ದೀರಾ ? ಪ್ರಕರಣ ವಿಚಾರಣೆಯ ಹಂತದಲ್ಲಿರುವಾಗ ಒಬ್ಬ ಅಂಕಣಾಕಾರ ತನಗೆ ತೋಚಿದ್ದನ್ನೆಲ್ಲ ಬರೆಯುವುದು ಒಬ್ಬ ಬರಹಗಾರನ ಪ್ರಬುದ್ದತೆಯ ಲಕ್ಷಣವಲ್ಲ ಎಂಬುದು ನನ್ನ ನಮೃ ಅನಿಸಿಕೆ. ನಿಮಗೆ ನ್ಯಾಯಲಯದ ತೀರ್ಪಿನ ಮೇಲೆ ವಿಶ್ವಾಸವಿಲ್ಲವಾದರೆ ಯಾಕೆ ಕೇಸು ಹಾಕಬೇಕು?

ಮುಗಿಸುವ ಮುನ್ನ ,

ಇದು ಸಹಜವೋ,  ಕಾಕತಾಳಿಯವೋ  ಅರಿಯೆ. ಆದರೆ ನೀವು ಬರಹವನ್ನು ಕನ್ನಡ ಮತ್ತು ಕರ್ನಾಟಕದ ಬೆಳವಣಿಗೆಗೆ ಕೊಂಕಣಿ ಭಾಷಿಕರ ಕೊಡುಗೆಯಿಂದ ಆರಂಭಿಸಿದ ರೀತಿ ಮಾತ್ರ ಅನನ್ಯವಾದದ್ದು.  ಹೌದು ವಸಂತ್ ,  ಒಂದು ಕಾಲವಿತ್ತು - ಬ್ಯಾಂಕಿಂಗ್, ಸಾಪ್ಟ್‌ವೇರ್, ವೈದ್ಯಕೀಯ ರಂಗ, ಶಿಕ್ಷಣ ಸಂಸ್ಥೆಗಳು, ಪತ್ರಿಕೋದ್ಯಮ ಮುಂತಾದ ಉದ್ಯಮಗಳಿಗೆ ಕೊಡುಗೆ ನೀಡಿದವರು  ಕೊಂಕಣಿ ಭಾಷಿಕರು ಎಂದು ನಾವು ಬಹಳ ಹೆಮ್ಮೆಯಿಂದ ಎದೆತಟ್ಟಿ ಹೇಳಿಕೊಳ್ಳುತ್ತಿದ್ದೆವು. ನನಗೆ ಚೆನ್ನಾಗಿ ನೆನಪಿದೆ, ಈಗ್ಗೆ 25 - 30  ವರ್ಷಗಳ ಹಿಂದೆ ಚಾ. ಫ್ರಾ. ದೆಕೊಸ್ತಾ, ಡೊ| ವಿಲ್ಲಿ ಆರ್. ಡಿಸಿಲ್ವ, ಮೆಲ್ವಿನ್ ರೊಡ್ರಿಗಸ್ ರಂತಹ ವಿದ್ವಾಂಸರು, ಕವಿಗಳು ಕೊಂಕಣಿ ಭಾಷೆ ಮತ್ತು ಸಾಹಿತ್ಯಕ್ಕಾಗಿ ತಮ್ಮದೆಲ್ಲವನ್ನೂ ಧಾರೆಯೆರೆದು ಕೊಂಕಣಿ ಭಾಷೆ ಮತ್ತು ಸಾಹಿತ್ಯದ ಏಳಿಗೆಗಾಗಿ ಶ್ರಮಿಸಿದರು. ಸಂಘಟನೆಗಳನ್ನು ಕಟ್ಟಿದರು , ಬೆಳೆಸಿದರು. ಆಗ ನನ್ನಂತಹ ಸಾಕಷ್ಟು ಯುವಕರು ಇವರ ಗರಡಿಗಳಲ್ಲಿ ಪಳಗಿ ಬರಹಗಾರರಾದೆವು.  ಆದರೆ ಇಂದಿನ ಪರಿಸ್ಥಿತಿಯೇನು ಗೊತ್ತೇ - ಕೊಂಕಣಿ ಎನ್ನುವುದೇ ಶತ ಕೋಟಿ ರೂಪಾಯಿಗಳ ಉದ್ಯಮವಾಗಿ ಪರಿವರ್ತನೆಗೊಂಡಿದೆ. ಕೊಂಕಣಿಯ ಹೆಸರಿನಲ್ಲಿ ತಲೆಯೆತ್ತಿ ನಿಂತಿರುವ ಸಂಘಟನೆಗಳಲ್ಲಿ ಒಬ್ಬನೇ ಒಬ್ಬ ಬರಹಗಾರ - ಸಾಹಿತಿ ಪಧಾದಿಕಾರಿಯಿಲ್ಲ.  ಇದ್ದರೂ ನಾಮ್ ಕೆ ವಾಸ್ತೆ. ಉಳಿದಂತೆ -  ರಿಯಲ್ ಎಸ್ಟೇಟ್ ಉದ್ಯಮಿಗಳು, ಬಿಲ್ಡರ್‌ಗಳು,   ಟೂರ್ ಒಪರೇಟರ್‌ಗಳು, ಎಲೆಕ್ಟ್ರಿಕಲ್ ಕಾಂಟ್ರಾಕ್ಟಾರ್‌ಗಳು, ಲೈಟ್ - ಸಾಂವ್ಡ್  ಒಪರೇಟರ್‌ಗಳು, ಕೇಟರರ್‌ಗಳು  ಹೀಗೆ ಉದ್ಯಮಿಗಳೇ ಸಂಘಟನೆಯ ಪದಾದಿಕಾರಿಗಳು. ಪ್ರಾಮಾಣಿಕ ಬರಹಗಾರರು ಈ ಉದ್ಯಮಿಗಳ ಆರ್ಭಟಕ್ಕೆ ಹೇಸಿಕೊಂಡು ಮಾರುದ್ದ ನಿಂತಿದ್ದಾರೆ. ಕಾರ್ಯಕ್ರಮಗಳಿಗೆ ಹೊಗೋದಿಲ್ಲ.  ಉದ್ಯಮಿಗಳು ಮ್ಯೂಸಿಕಲ್ ಚೇರ್‌ನಂತೆ ವರ್ಷ ಎರಡು ವರ್ಷಕ್ಕೊಂದರಂತೆ ತಮ್ಮ ತಮ್ಮೊಳಗೇ ಹುದ್ದೆಗಳ ಬದಲಾವಣೆ ಮಾಡಿಕೊಳ್ಳುತ್ತಾರೆ ! ಯಾಕೆ ಗೊತ್ತೇ  ? ಕೊಂಕಣಿಯ ಹೆಸರಿನಲ್ಲಿ ಇಲ್ಲಿ ಕೋಟಿ ಕೋಟಿ ರುಪಾಯಿಗಳ ಪ್ರಾಜೆಕ್ಟ್‌ಗಳಾಗುತ್ತಿವೆ. ಕೊಂಕಣಿಯ ಹೆಸರಿನಲ್ಲಿ ಕೋಟಿ ಕೋಟಿ ರೂಪಾಯಿ ಸಂಗ್ರಹವಾಗುತ್ತಿದೆ. ಮತ್ತು ಹೀಗೆ ಸಂಗ್ರಹವಾದ ದುಡ್ಡು ಕಾರ್ಯಕ್ರಮಗಳನ್ನು ಮಾಡುವ ಮತ್ತು ಕಟ್ಟಡಗಳನ್ನು ಕಟ್ಟುವ ನೆಪದಲ್ಲಿ ತಮ್ಮ ತಮ್ಮೊಳಗೇ ಹಂಚಿಕೊಳ್ಳಲೆಂದು.  ನಿಮಗೆ ಸಾಧ್ಯವಿದ್ದರೆ -  ಕೊಂಕಣಿ ಹೆಸರಿನಲ್ಲಿ ಸರ್ಕಾರದಿಂದ ಕೆಲ ಸಂಘಟನೆಗಳಿಗೆ ಸಿಗುವ ದುಡ್ಡು, ಮತ್ತು ಸಾರ್ವಜನಿಕರಿಂದ ಸಂಗ್ರಹವಾದ ದುಡ್ಡು ಯಾರ ಖಾತೆಗೆ ಬಿಲ್ ಪಾವತಿ ರೂಪದಲ್ಲಿ ಹೋಗುತ್ತದೆ ಎಂಬುದರ ಕುರಿತು ಮಾಹಿತಿ ಕಲೆಹಾಕಿ ಒಂದು ಅಂಕಣ ಬರೆಯಿರಿ. ಎಂತಹ ವಿಪರ್ಯಾಸ ನೋಡಿ ವಸಂತ್ - ಕೊಂಕಣಿ ಭಾಷಿಕರು ಬ್ಯಾಂಕಿಂಗ್, ಸಾಫ್ಟ್‌ವೇರ್, ವೈದ್ಯಕೀಯ ರಂಗಗಳಿಗೆ ಕೊಡುಗೆ ನೀಡಿದ ಕಾಲವೆಲ್ಲಿ ? ಕೊಂಕಣಿ ಹೆಸರಲ್ಲಿ ತಮ್ಮ ಉದ್ದಿಮೆಗಳನ್ನು ನಡೆಸುತ್ತಿರುವ ಕಾಲವೆಲ್ಲಿ ? ಇಲ್ಲದಿದ್ದರೆ ಒಬ್ಬಿಬ್ಬರು ಸೇರಿ ಕೇಸ್ ಹಾಕುವುದಕ್ಕೂ ಲಕ್ಷ ಲಕ್ಷ ರುಪಾಯಿ ಸದಸ್ಯತ್ವ ಶುಲ್ಕದ ಸಂಘೋಟನ್ ಕಟ್ಟುವುದು ಅನಿವಾರ್ಯವೇ ? ಕೇಸ್ ಎನ್ನುವುದು ಸಂಘೋಟನ್ ಕಟ್ಟಲು ಒಂದು ಅಜೆಂಡಾ ಮಾತ್ರವೇ ?

 

 

ಇನ್ನೊಂದು ವಿಷಯ - ಇತ್ತೀಚೆಗೆ ಕರ್ನಾಟಕ ಸರಕಾರ ಭಾಷಾ ಅಕಾಡೆಮಿಗಳಿಗೆ ಅಧ್ಯಕ್ಷರನ್ನು ನೇಮಿಸಿದೆ. ದಿನಾಂಕ 28 ಫೆಬ್ರುವರಿ 2014  ರ ನೀವು ಅಂಕಣ ಬರೆಯುವ ಪತ್ರಿಕೆಯಲ್ಲಿ ಅಕಾಡೆಮಿಯ ಅಧ್ಯಕ್ಷರುಗಳ ಕಿರು ಪರಿಚಯ ಪ್ರಕಟವಾಗಿದೆ. ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸುವ ವಿಚಾರವನ್ನು ನಿಮ್ಮ ವಿವೇಕಕ್ಕೆ ಬಿಡುತ್ತೇನೆ. ಆದರೆ ತುಳು ಅಕಾಡೆಮಿಯ ಆಧ್ಯಕ್ಷರು ಎಷ್ಟು ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ, ಬ್ಯಾರಿ ಅಕಾಡೆಮಿಯವರು ಎಷ್ಟು ಕೃತಿಗಳನ್ನು ರಚಿಸಿದ್ದಾರೆ ಎಂಬ ವಿವರಗಳನ್ನು ಕೊಟ್ಟಿರುವಾಗ ಕೊಂಕಣಿ ಸಾಹಿತ್ಯ ಮತ್ತು ಸಂಗೀತಕ್ಕೆ ಗಣನೀಯ ಸೇವೆ ಸಲ್ಲಿಸಿದ್ದಾರೆ ಎಂದು ಪತ್ರಿಕೆಯಲ್ಲಿ ಬರೆಯಲಾದ ಕೊಂಕಣಿ ಅಕಾಡೆಮಿಯ ಅಧ್ಯಕ್ಷರ ಕೃತಿಗಳು ಮತ್ತು ದ್ವನಿಸುರುಳಿಗಳ ಬಗ್ಗೆ ವಿವರಗಳನ್ನು ಕೊಡಲು ನಿಮ್ಮ ಘನಪತ್ರಿಕೆ ಮರೆಯಿತೇ ? ಸಂಗೀತದ ಯಾವ ಪ್ರಕಾರದಲ್ಲಿ ಶಾಸ್ತ್ರೀಯವೋ ? ಪಾಶ್ಚಾತ್ಯವೋ ? ಸಾಹಿತ್ಯದ ಯಾವ ಪ್ರಕಾರದಲ್ಲಿ - ಕತೆ, ಕವಿತೆ , ಕಾದಂಬರಿ, ಪ್ರಬಂದ ಅವರು ಗಣನೀಯ ಸೇವೆ ಸಲ್ಲಿಸಿದ್ದಾರೆ ?  ಇದನ್ನು ನಾವು ಕರ್ನಾಟಕದ ಕೊಂಕಣಿ ಭಾಷೆ ಮತ್ತು ಸಾಹಿತ್ಯಕ್ಕೆ ಬಲವಂತದ ಯಾವ  ಸ್ನಾನ ಎಂದು ಕರೆಯಬೇಕು ಎಂದು ದಯವಿಟ್ಟು ಹೇಳಿ ವಸಂತ್. 

ಪ್ರೀತಿ ಇರಲಿ,

ಎಚ್ಚೆಮ್.  


COMMENTS

Venkatesh Baliga , Kodial Khaber, Mangalore Mar 17, 2014
HM Bhesh ! Hya anya bhashechak adik prasang naka ashilen....Tagelen Kuvalen Kussta assa(Tulu lipi vad).....amgelen sasam vinchuk ayla....ani amgele lokank tran une jallan dista.....lipi fight outsource kellana mhanu bhogta....

Alwyn Cordel , Mangalore Mar 16, 2014
Recently I read a status message on face - book calling Academy as "swa hita academy". After reading this . . . can we say that "academy for sale" to various Contractors / Real Estate and Builders ???? Shameless !!

Geoffrey , Hat hill Mar 16, 2014
When money rules each and every aspect of our lives, Konkani literature also just becomes a part of it and when the less mortals choose to follow the golden rule : ‘If you can’t beat them, join them’, hardcore Konkani lovers like HM, let their hearts bleed for their love.

Melka , Miyar Mar 16, 2014
Mr. Vasant, good that you are writing about Konkani. But please analyse the issue in every angles. It is good if any organisation is contributing for the development of Konkani. But it is wrong to portray that, Konkani develops only because of the said organisation. Moreover, the ultimate goal should be overall development of Konkani, not just the development of entrepreneurs in the name of Konkani.

Philip Mudartha , Vakola, Mumbai Mar 16, 2014
1. I appeal to Konkani Sahitya Academy to promote Han-geoul script. It is easy and most suitable. Dev-nagari does not fully support phonetic needs of my language as I speak it. 2. Alternately, Khadap, VJP, had invented a coded script in one of his best seller thriller of late sixties. That is an option also. 3. I am for my first option.

ಆಸ್ಟಿನ್ ಪ್ರಭು , ಚಿಕಾಗೊಡ್ದ್ Mar 15, 2014
ಎಂಚಿನ ಪುಲಿಕೊದ್ದೆಲ್ ಪಾತೆರ್ವಾರ್ ಮಾರಾಯ್ರೇ? ಹಿಂದಿಡ್ ಏರೆಕ್ಲಾ ಬರೆಯೆರೆ ಆವಂದ್; ಪಂಡಾ ಹಿಂದಿಗ್ ಲಿಪಿ ಇಜ್ಜಿ ಅತ್ತೇ? ಹಿಂದಿ ಬರೆಪುನಿ ದೇವನಾಗರಿ ಲಿಪಿಡ್; ಅಂಚನೇ ಇಂಗ್ಲಿಷ್‍ಗ್ಲಾ ಲಿಪಿ ಇಜ್ಜಿ - ತೆರಿಂಡೆ - ಇಂಗ್ಲಿಷ್ ಪರೆಪುನಿ ರೋಮನ್ ಲಿಪಿಡ್. ಬರೆನಗಾ ಅಂಚನೇ ಪಾತೆರ್ನಗಾ ಒಂತೆ ಚಿಂತನ-ಮಂಥನ ಮಲ್ತ್‍ದ್, ಜ್ಞಾನಿಕೆರ್ನ ಅಭಿಪ್ರಾಯ ದೆತೊನ್ದ್ ಬರೆಂಡಾ ವ ಪಾತೆಂರ್ಡಾ ಎಡ್ಡೆ. ಇಜ್ಜಾಂಡಾ ಇರೆನ ಬರವಣಿಗೆ ವ ಪಾತೆರ ಓದ್‍ದ್ ವ ಕೇಂನ್ಡ್ ಪೂರಾ ಜಗತ್ತೇ ತೆಲ್ಪೆರೆ ಉಂಡು; ಜಾಗ್ರತೆ ದೆತೊನ್ಲೆ.

Alphonse Mendonsa , Pangla Mar 15, 2014
Well said sir... yes many bygone writers of konkani sacrificed their money property for the Konkani cause and Konkani remained alive. But today the konkani is hijacked for different purpose and non-literary figures are in competition to bag the best posts. I think you gave a fitting reply to the above article in Udyawani. Keep up your good work for Konkani. Long live konkani. Wishing you and Kittall all the very best. We are with you always.

Melwyn , Pernal Mar 15, 2014
Wonderful article HM Sir.. Dear Vasant Shetty, I have no idea how you are related to konkany; but if you have real concern for konkani language and literature please clarify the points explored by HM. You are too much worried about the injustice to Konkani writers at Delhi. Delhi to bahut door hai bhai, What about the grave injustice to konkany writers of karnataka? Why you are not raising your voice when a businessmen was made academy president ? If you find plenty of literature in konkany written in kannda script, there is not a single able writer to become academy president in karanataka ? What about members ? how many of them are writers ? Will you accept a businessman as president to Tulu Academy ? Since you have started the debate please give justice to the writers of konkany in kannada script. Jai Konkany.

Kiran , Nirkan Mar 15, 2014
Still we will shout loudly... Amar konkani... Lamb jiyo Konkani...

M M ALVARES , Mangalore Mar 15, 2014
Salutes to your courage, factual and truthful reply. Let the Konkani world know what is what? Really some are making money, earning name and flourishing their business in the name of Konkani grants by Govt. and donations. Be careful, HM your voice may be thwarted by this cotrie.....with their influence, money power....Let Konkani triumph that is our intention and wish....

Philip Mudartha , somewhere in Gujarat Mar 15, 2014
Hard hitting indeed. redyAchya pAtir doodh votlAm-ga!