ಎಚ್ಚೆಮ್, ಪೆರ್ನಾಳ್

ಎಚ್ಚೆಮ್ ಪೆರ್ನಾಳ್ ಹ್ಯಾ ಲಿಕ್ಣೆನಾಂವಾನ್ ಕೊಂಕ್ಣಿ ಸಾಹಿತ್ಯ್ ಸಂಸಾರಾಂತ್ ಒಳ್ಕೆಚೊ ಹೆನ್ರಿ ಮೆಂಡೋನ್ಸಾ, ಗಾಂವಾನ್ ಪೆರ್ನಾಳ್ಚೊ. ಪ್ರಸ್ತುತ್ ಕೊಂಕ್ಣಿ ಸಾಹಿತ್ಯ್ ಆನಿ ಸಮಾಜೆಕ್ ಸಮರ್ಪಿತ್ ಜಾಳಿಸುವಾತ್ ಕಿಟಾಳ್ ತಶೆಂ ಆರ್ಸೊ ಪಂದ್ರಾಳೆಂ ಪತ್ರಾಚೊ ಸಂಪಾದಕ್. ಚಲ್ಯಾಂಕ್ ಚತ್ರಾಯ್(1999), ಕಯ್ದ್ಯಾಚೊ ಕವಿತಾ(2004), ಭಾಮುಣಾಂಚೆಂ ಚೆಡುಂ(2006) - ತಾಚೆ ಪ್ರಕಟಿತ್ ಕವಿತಾ ಜಮೆ. ದೆವಾಕ್ ಸೊಡ್ಲ್ಲೊ ಪಾಡೊ(2002), ಬೀಗ್ ಆನಿ ಬಿಗಾತ್ (2016) - ಮಟ್ವ್ಯಾ ಕಾಣಿಯಾಂ ಸಂಗ್ರಹ್. ಕೊಂಕ್ಣೆ ಶಿವಾಯ್ ಕನ್ನಡ್, ಇಂಗ್ಲಿಷ್ ಭಾಸಾಂನೀಯ್ ತೋ ಬರಯ್ತಾ.
Recent Archives
- ದೋನ್ ಶಿಂಗಾಂ - ಏಕ್ ಭರ್ವಸೊ; ಏಕ್ ವಾಟ್...
- ದಸೆಂಬರ್ 17 ವೆರ್ ಆರ್ಸೊ - ಪೊಯೆಟಿಕ್ಸ್ ಕಾರ್ಯೆಂ
- ಮ್ಹಜೆ ದೇವ್
- ಅಕಾಡೆಮಿಂತ್ ಸ್ತ್ರೀ ಸಾಹಿತಿಕ್ ಅಕ್ಮಾನ್, ಜವಾಬ್ದಾರ್ ಕೋಣ್?
- ಮೊಗಾಉಜ್ಯಾಂತ್ ಲಾಸ್ಲ್ಲೆಂ ಫುಲ್ - ಸಾಂ.ಅಲ್ಫೊನ್ಸಾ
- ಎಕಾ ಇಶ್ಟಿಣಿಚೆಂ ರುಪ್ಣೆಂ
- ಪಾಟ್ಲ್ಯಾ ಸ ವರ್ಸಾಂನಿ ಕಿಟಾಳ್ ’ಸ್ಪಶ್ಟ್’ ಉಲಯ್ಲಾಂ
- ಆಮ್ಚೊ ಪಾದ್ರ್ಯಾಬ್ : ಸರ್ಗಿಂ ಪಯ್ಣಾಕ್ 20 ವರ್ಸಾಂ
- ಮಾವ್ನ್ ಆಸಾಂ, ಮರೊಂಕ್ ನಾ
- ಶಿಕ್ಪಾಚೊ ವೆಪಾರ್, ಶಿಕ್ಶಕಾಂಚೊ ವಯ್ವಾಟ್ ಆನಿ ವಿದ್ಯಾರ್ಥಿಂಚೊ ಆಕ್ರೋಶ್
- ಲಿಯೊ ರೊಡ್ರಿಗಸ್ ಕುಟಮ್ ಯುವ ಪುರಸ್ಕಾರ್ ಪ್ರದಾನ್ ಕಾರ್ಯೆಂ, ಡೊ| ಜಿ. ಜಿ. ಲಕ್ಷ್ಮಣ ಪ್ರಭು ಉಪನ್ಯಾಸ್
- ಪಾವ್ ಶೆರ್ ಜಿಂದಗೀ
- "ಆಮಿ ಗೊರ್ವಾಂ ಪೊಸ್ಚಿಂ ಆರ್ಬ್ಯಾಂಕ್ ಖಾವಂವ್ಕ್..." - ನಿ| ಮೈಕಲ್ ಎಫ್. ಸಲ್ಡಾನ್ಹಾ
- ಕೊಣಾಚ್ಯಾ ಖೊರ್ಜಿಕ್ ಕೊಣಾಕ್ ಇಂಜೆಕ್ಷನ್ ?
- ಕಾಜು ಬಿ, ಮಾಂಯ್ ಭಾಸ್ ಆನಿ ಸಂಸ್ಕೃತಿ
- ಬಣ್ಣ ಕಡ್ಡಿ - ಜೋನ್ ಬ್ಯಾಪ್ಟಿಸ್ಟ್ ಆನಿ ರೋಹಿತ್ ವೆಮುಲ
- ಜುದಾಸಾಚಿಂ ಸಂವೇದನಾಂ; ಜೆಜುಚೆರ್ ದುಬಾವ್ ?
- ಕಟೀಲಾಚಿ ಕವಿತಾ ಆನಿ ಕನ್ಹಯ್ಯಾಚೆ ವಿಚಾರ್
- ಸರ್ವಜಣಿಕ್ ಹಿತಾಸಕ್ತ್ ವಾ ಸ್ವ - ಹಿತಾಸಕ್ತ್ ?
- ಪೊಟಾಚೊ ಗ್ರಾಸ್ ಆನಿ ಆತ್ಮ್ಯಾಚೊ ಸಂತೊಸ್
- ಕೊಂಕ್ಣಿ ಸಿನೆಮಾಕ್ ಮ್ಯಾಜಿಕ್ ಟಚ್ - EAEN
- ನವಿ ತಾಂತ್ರಿಕತಾ, ನವೊ ವಿನ್ಯಾಸ್ , ವಾಚ್ಪ್ಯಾಂಲಾಗಿಂ ಏಕ್ ವಿನವ್ಣಿ
- ಸಬ್ ಕುಛ್ ಚಲ್ತಾ ಹೈ ?
- ಪ್ರೇಕ್ಷಕಾಕ್ ಕರಿನಾಕಾತ್ ನಜರಂದಾಜ್ !
- ಆಮ್ಚೊ ಬಿಸ್ಪ್ ಬ್ರ್ಯಾಂಡ್ ಅಂಬಾಸಿಡಾರ್ ?
- ಖುರ್ಸಾರ್ ಮೊರೊಂಕ್ ವೆಚೆಂ ಆದಿಂ
- ಪಾಂಚ್ವ್ಯಾ ವರ್ಸಾಚ್ಯಾ ಹುಂಬ್ರಾರ್ ಕಿಟಾಳ್ : ಥೊಡಿಂ ಭೊಗ್ಣಾಂ, ಥೊಡಿಂ ಸಪ್ಣಾಂ
- ಪ್ರಾಮಾಣಿಕತಾ, ಸಮಗ್ರತಾ ಆನಿ ಧಯ್ರ್
- ಲೊಕಾಚೊ ಗೊವ್ಳಿ : ವರ್ಸಾಚೊ ವೆಕ್ತಿ
- ಮುಕೆಲ್ಯಾಂಚ್ಯಾ ಪ್ರಚಾರ್ ಪಿಸಾಯೆಕ್ ಬಲಿ - ದುಬ್ಳೆ ಜೀವ್ ?
- ಚಿಕ್ಮಗ್ಳುರ್ಚೊ ಕೊಂಕ್ಣಿ ಲೋಕ್ : ದುಸ್ರ್ಯಾ ವರ್ಗಾಚೊ ?
- ಗಿಟಾರ್ ಆನಿ ರೆತಿರ್
- ಕರ್ನಾಟಕದಲ್ಲಿ ಕೊಂಕಣಿಗೆ ಬಲವಂತದ ’ಉದ್ಯಮಸ್ನಾನ?’
- ವಾವ್ರಾಚಿ ಆನಿ ರಿಣಾಚಿ ’ಫಟ್ಕಿರಿ’ ಕಾಣಿ
- ಮೆಲ್ಲ್ಯಾ ಮೊಶಿಕ್ ಬಾರಾ ಕುಟ್ಟಿಂ ದೂದ್ ?
- ಥೊಂಟ್ಯಾ ಕೊಂಕ್ಣೆಕ್ ಕನ್ನಡ ವಾಕರ್ ?
- ಕಿಟಾಳ್ ಚವ್ತ್ಯಾ ವರ್ಸಾಂತ್ ಪ್ರವೇಶ್ : ಏಕ್ ಉಪ್ಕಾರ್ ಆಟವ್ಣಿ
- ಸಮಾನ್ ಚಿಂತಪ್ ವಾ ಸಮಾನ್ ಆಸಕ್ತ್?
- ಯೆತಾ - ಕಿಟಾಳಾಚೆಂ ಕೊಂಕ್ಣಿ ಪತ್ರ್
- ಏಕ್ ಮೊಗಾಚೆಂ ಆಪವ್ಣೆಂ
- ಆಂಡ್ರ್ಯೂಚಾ ಕವಿತೆಂನಿ ರುಪಾಂ ಬದಲ್ಚೊ ವಾಗ್
- ಲಾಯಿಕ್ ನ್ಹಯ್ , ನಾಲಾಯೆಕ್ ತುಮಿ - ಫಾ. ವಿಲಿಯಂ ಮಾರ್ಟಿಸ್
- ಮುಳಾವೆಂ ಶಿಕ್ಷಣ್ ಇಂಗ್ಲಿಶಾಂತ್ ದಿಯಾ,ಪೂಣ್ ಸರ್ಕಾರಿ ಗ್ರ್ಯಾಂಟ್ ವಿಚಾರ್ನಾಕಾತ್ - ಮೀನಾ ಕಾಕೊಡ್ಕರ್
- ಕೊಂಕ್ಣೆಂತ್ ಗದ್ಯ್ ಸಾಹಿತ್ಯ್ ವಾಡ್ಟೇ ಆಸಾ - ದಾಮೋದರ್ ಮಾವ್ಜೊ.
- ಹಾಂವ್ ಏಕ್ ಕಾಣಿಯಾಂಗಾರ್ - ವಲ್ಲಿ ವಗ್ಗ
- ನವ್ಯಾಂಕ್ ಕೊಣೆಂ ಆಡಾಯ್ಲಾಂ? - ಜೊನ್ ಡಿ’ಸಿಲ್ವಾ
- ಹಾಂವ್ ತೃತೀಯ ಶಕ್ತಿ - ಚಿನ್ನಾ ಕಾಸರಗೋಡು
- ಬರಯಿಲ್ಲೆಂ ಆನಿ ಛಾಪ್ಯಾಕ್ ಘಾಲ್ಲೆಂ ಉರ್ತಾ - ಬಾ. ಸ್ಟೀವನ್ ಪಿರೆರ್
- ಭುರ್ಗ್ಯಾಂಚೆಂ ಸಾಹಿತ್ಯ್ ರಚ್ಚ್ಯಾಂತ್ ತೃಪ್ತಿ ಆಸಾ - ಜೆ.ಎಫ್.ಡಿಸೋಜಾ
- ನಾಯ್ಟಾಂತ್ ಗಾವ್ಪ್ಯಾಂಚೆಂ ಪ್ರಸಂಟೇಶನ್ ಮಹತ್ವಾಚೆಂ - ಸ್ಟ್ಯಾನಿ ಮೆಂಡೋನ್ಸಾ
- ಆನಿ ತರೀ ಉಜ್ವಾಡು ಫಾಂಕೊಂ
- ಹೆ ರಾಕ್ಣೆ - ಭಾಶೆಚೆ ? ಭಾವಾಡ್ತಾಚೆ ?
- ಕೊಂಕ್ಣೆ ವಿಶ್ಯಾಂತ್ ಇತ್ಲೆಂ ನೆಗೆಟಿವ್ ಉಲೊಣೆಂ ಕಿತ್ಯಾಕ್ ?
- ಕಾಳೊಕು , ಉಜ್ವಾಡು ಆನಿ ಅಂದ್ಕಾರು !
- ತಿಸ್ರ್ಯಾ ವರ್ಸಾಚ್ಯಾ ಹುಂಬ್ರಾರ್ . . .
- ಉಜ್ವಾಡು - ಅನಾಥ್ಪಣಾಚಿ ಕಾಣಿ !
- ಸರ್ದಾರ್ ಸಿಮಾಂವ್ - ರಿಚರ್ಡ್ ಸಿಕ್ವೇರಾ - ಆನಿ ನಾ.
- ತಬರ ಶೆಟ್ಟಿ , ಮುತ್ಸದ್ಧಿ ಲಾಲ್ ಆನಿ ಕೇಜ್ರಿವಾಲ್
- ಸತ್ ಆನಿ ಸತಾಚಿ ಪರೀಕ್ಷಾ
- ಮ್ಹಾಕಾ ಕಿತ್ಯಾಕ್ ಬರಂವ್ಕ್ ಜಾಯ್ನಾ ?
- ವಲ್ಲಿ ವಗ್ಗ - ಸ್ಪಶ್ಟ್ ದಿಶ್ಟಾವ್ಯಾಚೊ ಮನಿಸ್
- ಶಿಜೊನ್ ಆಸ್ಚೆಂ ಜಿವಿತ್ - ಕವಿತಾ.
- ಅಕಾಡೆಮಿಂತ್ಲೆಂ ಪೊಲಿಟಿಕ್ಸ್ . . . ವ್ಯಾಕ್ !
- ವರಸ್ ಜಾತಾನಾ. . .
- ಎಕಾ ಪೆಂಟೆಚಿ ಕಾಣಿ
- ಬೌ ಬೌ ಆನಿ ಡೌ ಡೌ - ಕನ್ಕ್ಲೂಷನ್
- ಪೆರ್ನಾಲ್ ಥಾವ್ನ್ ಕೆಂಜಾರ್ - ಉಡಾಸಾಂಚೊ ಪುರ್ಶಾ
- ನಿರ್ವಾರ್ಯಾಚೆಂ ಏಕ್ ವರಸ್
- ಏಕ್ ಪ್ರಾಮಾಣಿಕ್ ಪ್ರೇತನ್
ಥೊಂಟ್ಯಾ ಕೊಂಕ್ಣೆಕ್ ಕನ್ನಡ ವಾಕರ್ ?
ಪರಿಸ್ಥಿತಿ ಕಿತ್ಲ್ಯಾ ವೆಗಾನ್ ಬದಲ್ತಾ ಆನಿ ವಸ್ತುಸ್ಥಿತಿ ಚಡ್ ತೇಂಪ್ ಉಗ್ತಾಡಾಕ್ ಯೇನಾಸ್ತಾನಾ ಉರಾನಾ ಮ್ಹಣ್ಚ್ಯಾಕ್ ಆಯ್ಲೆವಾರ್ ಕೊಂಕ್ಣೆಚ್ಯಾ ಸುತ್ತುರಾಂತ್ ಜಾವ್ನ್ ಆಸ್ಚಿ ವಾಡಾವಳ್ಚ್ ಸಾಕ್ಸ್. ಕಾಂಯ್ ಚಡ್ ವರ್ಸಾಂ ಜಾಂವ್ಕ್ ನಾಂತ್- ಹಾಂವ್ ಆನಿ ಮ್ಹಜೆ ಥೊಡೆ ಸಾಂಗಾತಿ ಕೊಂಕ್ಣಿ ಸಾಹಿತ್ಯಾಚಿ ಮೊಲಾಮಾಪ್ಣಿ ಕರ್ತಾನಾ ಕನ್ನಡಾಚ್ಯಾ ಉಂಚ್ಲ್ಯಾ ಸಾಹಿತ್ಯಾಸವೆಂ ತುಲನ್ ಕರ್ತೆಲ್ಯಾಂವ್. ಅಶೆಂ ತುಲನ್ ಕರ್ನ್ ಉಲಂವ್ಚೆಂಚ್ ಅಫ್ರಾದ್ ಮ್ಹಳ್ಳೆಪರಿಂ ತ್ಯಾ ವೆಳಾರ್ ಆಮ್ಚೆಂ ಚಿಂತಪ್ ವಿರೋಧ್ ಕರ್ನ್ ಬರಯಿಲ್ಲೆ ಕೊಂಕ್ಣೆಚೆ ಸ್ವ ಘೋಶಿತ್ ಮ್ಹಾನ್ ಸಾಹಿತಿ ಸಗ್ಳೆ ಆಜ್ ಸಂಘಟನ್ ಬಾಂದುನ್ ಕನ್ನಡಾಚ್ಯಾ ಮೊಗಾರ್ ಪಡ್ಲ್ಯಾತ್. ಕಿತ್ತೂನ್ ಪರ್ಯಾಂತ್ ಮ್ಹಳ್ಯಾರ್ ಅಸ್ಕತ್ ಜಾಲ್ಲ್ಯಾ ಹಾಂಚ್ಯಾ ಕೊಂಕ್ಣಿ ಪೆಂಕ್ಟಾಕ್ ಚಲೊಂಕ್ ಕನ್ನಡ ವಾಕರಾಚಿ ಗರ್ಜ್ ಪಡ್ಲ್ಯಾಶೆಂ ದಿಸ್ತಾ. ದೆಕುನ್ ಆಜ್ ಕಾಲ್ ಕನ್ನಡ ಪತ್ರಾಂನಿ ಕೊಂಕ್ಣೆಕ್ ಕನ್ನಡಾಚೆಂ ’ಬಳ್’ ಜಾಯ್ಜೆ ಮ್ಹಳ್ಳಿ ಬರ್ಪಾಂ ಯೇಂವ್ಕ್ ಲಾಗ್ಲ್ಯಾಂತ್.
ಬೋವ್ ಹಾಸ್ಯಾಸ್ಪದ್ ಗಜಾಲ್ ಮ್ಹಳ್ಯಾರ್ ಆಜ್ ಕೊಂಕ್ಣಿ ಸಾಹಿತ್ಯಾಕ್ ಕನ್ನಡ ಬಳ್ ಜಾಯ್ಜೆ ಮ್ಹಣ್ತಾಲೆ ಕೊಂಕ್ಣಿ ಲಿತುರ್ಜೆಚಿ ಗಜಾಲ್ ಯೆತಾನಾ ಮಾತ್ ಕನ್ನಡ ಲೊಕಾಕ್ ಭಾಶೆಚೆ ಅತಿರೇಕಿ (language fanatics) ಮ್ಹಣ್ತಾತ್ . ಮಾಗಿರ್ ತಿ ಗಜಾಲ್ ಚಿಕ್ಮಗ್ಳುರ್ ದಿಯೆಸೆಜಿಚಿ ಆಸುಂ, ಬೆಂಗ್ಳುರ್ ಆರ್ಚ್ದಿಯೆಸೆಜಿಚಿ. ಹಾಂವ್ ಹೆಂ ಬರಯ್ತಾನಾ, ದಿಯೆಸೆಜಿಚ್ಯಾ ಪತ್ರಾರ್ ಬೈಬಲ್ ಸಯ್ತ್ ಸಾಹಿತ್ಯ್ ಮ್ಹಳ್ಳಿ ಖಬರ್ ಮುಕ್ಪಾನಾರ್ ಛಾಪೊನ್ ಆಯ್ಲ್ಯಾ ಆನಿ ಬೆಂಗ್ಳುರಾಂತ್ ಸೆಮಿನರಿಚ್ಯಾ ರೆಕ್ಟರಾಚ್ಯಾ ಖುನಿಯೆ ಪಾಟ್ಲ್ಯಾನ್ ಭಾಶೆಚೆಂ ಝುಜ್ ಏಕ್ ಕಾರಣ್ ಆಸುಂಯೆತಾ ಮ್ಹಳ್ಳೊ ದುಬಾವ್ ವಯ್ರ್ ಪಡ್ಲಾ.
ಮ್ಹಾಕಾ ಹೆಂ ಸಮ್ಜಾನಾ - ಲಿತುರ್ಜೆಚಿ ಗಜಾಲ್ ಯೆತಾನಾ ಕೊಂಕ್ಣೆಕ್ ಅತಿರೇಕಿ ಜಾಲ್ಲೆ ಕನ್ನಡ ಮನಿಸ್, ಎಕಾಣೆಂ ಲಿಪಿಯೆಚಿ ಗಜಾಲ್ ಯೆತಾನಾ ಕಶೆಂ ಕೊಂಕ್ಣೆಚೆ ಮೋಗಿ ಮಾತ್ ನಯ್ ಸೊಡ್ವೊಣ್ದಾರ್ ಜಾಲೆ ? ಕೊಂಕ್ಣಿ ಸಾಹಿತ್ಯಾಚಿ ಗಜಾಲ್ ಯೆತಾನಾ ದೇವ್ನಗರಿ ಲಿಪಿ ಹೇರಿಕೆ ಜಾಲಿ ಮ್ಹಣ್ತಾತ್, ಕೊಂಕ್ಣಿ ಮಿಸಾಂಚಿ ಗಜಾಲ್ ಯೆತಾನಾ ಕನ್ನಡ ಹೇರಿಕೆ ಜಾಲಿ ಮ್ಹಣ್ತಾತ್ ತರ್ ಎಕುಣ್ ಹ್ಯಾ ಮನ್ಶ್ಯಾಂಕ್ ಕಿತೆಂ ಜಾಯ್ ? ಕಿತ್ಯಾಕ್ ಶಿರ್ಲ್ಯಾಪರಿಂ ಹೆ ಮನಿಸ್ ಆಪ್ಲೊ ವೇಸ್ ಘಡ್ಯೆನ್ ಬದ್ಲಿತಾತ್ ? ಕೊಂಕ್ಣೆಚ್ಯಾಂಕ್ ಮಾತ್ ನಯ್ ಕನ್ನಡ ಲೊಕಾಕೀ ಮಾಂಕೊಡ್ ಕರ್ಚ್ಯಾರ್ ಪಡ್ಲ್ಯಾತ್ ? ಹೊ ಖೆಳ್ ಫಕತ್ ಡಬ್ಬೆ ಬಡವ್ನ್ , ಆವಾಜ್ ಉಟವ್ನ್ ಸದಾಂ ಖಬ್ರೆರ್ ಉರೊಂಕ್ ಪ್ಲ್ಯಾನ್ ವಾ ಹಾಚೇ ಪಾಟ್ಲ್ಯಾನ್ ಆನಿ ಕಿತೆಂ ತರೀ ಶಿರಿಗುಂಡಿ ಆಸಾ ?
ಆದ್ಲ್ಯಾ ಹಫ್ತ್ಯಾಂತ್ ಉದಯವಾಣಿ ಪತ್ರಾರ್ ಫಾಯ್ಸ್ ಜಾಲ್ಲ್ಯಾ ಅಂಕಣಾಕ್ ಹಾಂವೆ ಹಾಂಗಾಸರ್ ಜಾಪ್ ದಿಲ್ಲಿ, ಆತಾಂ ಪ್ರಜಾವಾಣಿ ಪತ್ರಾಚ್ಯಾ ಅಂಕಣಾಕ್ ಜಾಪ್ ಆಸಾ. ಹೀಯ್ ಜಾಪ್ ತ್ಯಾ ಪತ್ರಾಕ್ ಧಾಡುನ್ ದಿಲ್ಯಾ. ಫಾಯ್ಸ್ ಜಾತಾ ಮ್ಹಳ್ಳಿ ಹಮಿದಾರಿ ನಾ ದೆಕುನ್ ಹಾಂಗಾಸರ್ ಕನ್ನಡಾಂತ್ ದಿಲ್ಯಾ.
ಮಾನ್ಯ ಕೋಡಿಬೆಟ್ಟು ರಾಜಲಕ್ಷ್ಮಿ,
ನಮಸ್ಕಾರ.
ಪ್ರಜಾವಾಣಿ ಪತ್ರಿಕೆಯಲ್ಲಿ ದಿನಾಂಕ 4 ಮಾರ್ಚ್ 2014ರ ಅಭಿಮತ ಪುಟದ ಸಂಗತ ಅಂಕಣದಲ್ಲಿ ಪ್ರಕಟವಾದ ಕೊಂಕಣಿಗರ ಲಿಪಿ ಚಳವಳಿ : ಬೇಕಿದೆ ‘ಕನ್ನಡ’ ಬಲ ಎಂಬ ನಿಮ್ಮ ಬರಹವನ್ನು ತುಸು ತಡವಾಗಿಯೇ ಗಮನಿಸಿದೆ. ಕೊಂಕಣಿಯ ಭಾಷಾವಲಯ ಆಂತರಿಕ ಕಲಹಕ್ಕೆ ಸಜ್ಜಾಗುತ್ತಿದೆ ಎಂಬ ನಿಮ್ಮ ಗ್ರಹಿಕೆಯ ಮೂಲ ಯಾವುದು ಎಂಬುದನ್ನು ನಿಖರವಾಗಿ ನನಗೆ ಗುರುತಿಸಿವುದು ಅಸಾಧ್ಯವಾದರೂ, ಮೊನ್ನೆ ಮೊನ್ನೆ ಹುಟ್ಟಿದ ಒಂದು ಸಂಘಟನೆಯ ರೂವಾರಿ ನಿಮ್ಮ ಕಿವಿಯಲ್ಲಿ ಊದಿದ್ದೆಲ್ಲವನ್ನೂ ನೀವು ಅಕ್ಷರಶಃ ನಿಜವೆಂದು ನಂಬಿದ್ದೀರಿ ಎಂಬುದನ್ನು ನಾನು ಸುಲಭವಾಗಿ ಊಹಿಸಬಲ್ಲೆ. ಯಾವ ಅಂಕಿ ಅಂಶಗಳ ಆಧಾರದಲ್ಲಿ ನೀವು ಕನ್ನಡ ಲಿಪಿಯ ಕೊಂಕಣಿಯಲ್ಲಿ ಹೆಚ್ಚಿನ ಸಾಹಿತ್ಯ ಸೃಷ್ಟಿಯಾಗಿದೆ ಎಂಬ ತೀರ್ಮಾನಕ್ಕೆ ಬಂದಿದ್ದೀರಿ ಎಂಬುದನ್ನು ಮಾತ್ರ ನನ್ನಿಂದ ಊಹಿಸಲು ಸಾಧ್ಯವಾಗಿಲ್ಲ. ದೇವನಾಗರಿ, ಕನ್ನಡ ಮತ್ತು ರೋಮನ್ ಲಿಪಿಯಲ್ಲಿ ವರ್ಷವಾರು ಪ್ರಕಟವಾಗುವ ಪುಸ್ತಕಗಳ ಪಟ್ಟಿ ನಿಮ್ಮಲ್ಲಿ ಲಭ್ಯವಿದೆಯಾ? ಸಂಬಂದಪಟ್ಟ ರಾಜ್ಯಗಳಲ್ಲಿರುವ ಕೊಂಕಣಿ ಅಕಾಡೆಮಿಗಳಿಂದ ಈ ಮಾಹಿತಿಯನ್ನು ನೀವು ಪಡೆದುಕೊಂಡಿದ್ದೀರಾ? ಕೊಂಕಣಿಯಲ್ಲಿ ಇರುವ ಒಂದೇ ಒಂದು ದಿನಪತ್ರಿಕೆ ದೇವನಾಗರಿ ಲಿಪಿಯಲ್ಲಿ ಪ್ರಕಟವಾಗುತ್ತಿದೆ ಎಂಬ ಅರಿವಾದರೂ ನಿಮಗಿದೆಯಾ ? ಈ ಕುರಿತು ತಿಳಿಸಿದರೆ ಉಪಕಾರವಾದೀತು.
ಸಾಹಿತ್ಯ ಕೃತಿಯೊಂದು ತನ್ನದಾಗಿಸಿಕೊಳ್ಳುವ ಪುರಸ್ಕಾರದಿಂದಲೇ ತನ್ನ ಸಾರ್ಥಕತೆಯನ್ನು ಕಂಡುಕೊಳ್ಳುತ್ತದೆ ಎಂಬ ನಿಮ್ಮ ನಿಲುವಿಗೆ ನನ್ನ ಆಕ್ಷೇಪವಿದೆ. ಅನಂತಮೂರ್ತಿ, ಲಂಕೇಶ್, ದೇವನೂರು, ಚಿತ್ತಾಲ, ರಾಘವೇಂದ್ರ ಖಾಸನೀಸ, ತೇಜಸ್ವಿ ಮುಂತಾದವರನ್ನು ಓದಿ ಬೆಳೆದವ ನಾನು. ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರವನ್ನು ಲಿಪಿಗೆ ಕೊಡಬೇಕೊ ಅಥವಾ ಸಾಹಿತ್ಯಕ್ಕೆ - ಎಂಬ ನನ್ನ ಮೂಲ ಪ್ರಶ್ನೆಗೆ ನಿಮ್ಮ ಉತ್ತರವೇನು ಎಂದು ತಿಳಿಯುವ ಕಾತರದಲ್ಲಿರುವೆ. ಸಾಕಷ್ಟು ವರ್ಷಗಳ ಹಿಂದೆಯೇ ಮೂರು ಕವನ ಸಂಕಲನಗಳು ಮತ್ತು ಒಂದು ಕಥಾ ಸಂಕಲನವನ್ನು ಪ್ರಕಟಿಸಿ, ಕಳೆದ ಮೂರು ವರ್ಷಗಳಿಂದ ಕಿಟಾಳ್ ಎನ್ನುವ ಕೊಂಕಣಿಯ ಸಂಪೂರ್ಣ ಸಾಹಿತ್ಯಿಕ ವೆಬ್ಸಾಯ್ಟನ್ನು ಕನ್ನಡ ಲಿಪಿಯಲ್ಲೇ ಪ್ರಕಟಿಸುತ್ತಾ ಬಂದಿರುವ ಮತ್ತು ಇತ್ತೀಚೆಗೆ ಆರ್ಸೊ ಸಾಹಿತ್ಯಿಕ ಪತ್ರಿಕೆಯನ್ನು ಆರಂಭಿಸಿರುವ ನನಗೆ - ಲಿಪಿ , ಪುರಸ್ಕಾರಗಳಿಗಿಂತಲೂ ಹೆಚ್ಚಿನ ಸಂಖ್ಯೆಯ ಓದುಗರನ್ನು ತಲುಪುವುದು ಮುಖ್ಯವೆನಿಸುತ್ತದೆ. ನನ್ನದೇ ನಿಲುವನ್ನು ಹೊಂದಿರುವ ಬಹಳಷ್ಟು ಬರಹಗಾರರು ಕೊಂಕಣಿಯಲ್ಲಿ ಇದ್ದಾರೆ. ಅವರ ಕೃತಿಗಳು ಕನ್ನಡ - ದೇವನಾಗರಿ ಎರಡೂ ಲಿಪಿಯಲ್ಲಿ ಪ್ರಕಟವಾಗುತ್ತವೆ ಮತ್ತು ಹೆಚ್ಚೆಚ್ಚು ಓದುಗರಿಗೆ ತಲುಪುತ್ತವೆ. ವಸ್ತುಸ್ಥಿತಿ ಹೀಗಿರುವಾಗ ತಮ್ಮ ಜೀವಮಾನದಲ್ಲಿ ಒಂದಕ್ಷರ ಬರೆಯದವರು ಯಾವ ಮತ್ತು ಯಾರ ‘ಆಮಿಷ’ ಕ್ಕೊಳಕ್ಕಾಗಿ ಕೇಸು ಹಾಕುತ್ತಾರೆ ಎಂಬುದನ್ನು ಪ್ರಜ್ಞಾವಂತರಾದ ನೀವು, ಅಂಕಣ ಬರೆಯುವ ಮುನ್ನ ಅವಲೋಕಿಸಿ ನೋಡಬೇಕಿತ್ತು.
ಕನ್ನಡ ಲಿಪಿಯನ್ನು ಬಳಸುವ ಪ್ರಾದೇಶಿಕ ಭಾಷೆಗಳು ಒಟ್ಟಂದದಲ್ಲಿ ಕನ್ನಡಕ್ಕೆ ಮಹತ್ವದ ಕೊಡುಗೆ ನೀಡಿದ್ದಾವೆ ಎಂಬ ನಿಮ್ಮ ನಿಲುವನ್ನು ಒಪ್ಪಿಕೊಂಡರೂ, ಕೊಂಕಣಿಯ ಎಷ್ಟು ಸಾಹಿತ್ಯ ಕೃತಿಗಳು ಕನ್ನಡಕ್ಕೆ ಅನುವಾದಗೊಂಡಿವೆ ? ಎಂಬ ಬಗ್ಗೆ ನನಗೆ ಗುಮಾನಿಗಳಿವೆ. ಆದರೆ ಕನ್ನಡದ ಉತ್ತಮ ಕೃತಿಗಳು ಕೊಂಕಣಿಗೆ ಬಂದಿವೆ, ಈಗಲೂ ಬರುತ್ತಿವೆ. ಅನಂತಮೂರ್ತಿ, ಚಿತ್ತಾಲ, ತೇಜಸ್ವಿ, ಕಾರ್ನಾಡ್, ನಾ. ಡಿ’ಸೊಜಾ, ಜಯಂತ್ ಕಾಯ್ಕಿಣಿ ಎಲ್ಲರೂ ಕನ್ನಡದಿಂದ ಕೊಂಕಣಿಗೆ ಬಂದಿದ್ದಾರೆ, ಬರುತ್ತಲೇ ಇದ್ದಾರೆ.
ಖಾಸಗಿ ಮಟ್ಟದಲ್ಲಿ ಕರ್ನಾಟಕದಲ್ಲಿ ಕನ್ನಡ ಲಿಪಿ ಬಳಸುವವವರ ಕೊಂಕಣಿ ಕಾರ್ಯಕ್ರಮಗಳು ಹೆಚ್ಚಿನ ಮಟ್ಟದಲ್ಲಿ ನಡೆಯುತ್ತವೆ ಎಂಬ ನಿಮ್ಮ ಮಾತನ್ನು ನಾನು ಮಾತ್ರ ಖಂಡಿತ ಒಪ್ಪುತ್ತೇನೆ. ಕನ್ನಡ ಲಿಪಿಯವರ ಕೊಂಕಣಿ ಕಾರ್ಯಕ್ರಮಗಳ ಬಜೆಟ್ಟು ಕೋಟಿ ಕೋಟಿ ರುಪಾಯಿಗಳಷ್ಟಿದ್ದು ನೀವು ಬಹಳ ಅಭಿಮಾನದಿಂದ ಉಲ್ಲೇಕಿಸಿದ, ಇತ್ತೀಚೆಗೆ ಹುಟ್ಟಿಕೊಂಡ ಸಂಘಟನೆಗಳ ಸದಸ್ಯತ್ವ ಶುಲ್ಕವೇ ಲಕ್ಷ ಲಕ್ಷ ರುಪಾಯಿ ಇದೆಯಂತೆ. ಬಡಪಾಯಿ ಬರಹಗಾರರಲ್ಲಿ ಲಕ್ಷ ರುಪಾಯಿ ತೆತ್ತು ಈ ಕ್ಲಬ್ಗಳ ಸದಸ್ಯತ್ವ ಗಿಟ್ಟಿಸಿಕೊಳ್ಳಲು ತಾಕತ್ತಿಲ್ಲವೆಂದು ಅವರಿಗೊಂದು ಸಾಧಾರಣ ಸದಸ್ಯತ್ವ ಶುಲ್ಕದ ಸಂಘಟನೆಯೂ ಇತ್ತೀಚೆಗೆ ಹುಟ್ಟಿಕೊಂಡಿದ್ದು ಮೊದಲ ಸಂಘಟನೆ ಬರೀ ಉಳ್ಳ ಉದ್ಯಮಿಗಳಿಗೆ ಮೀಸಲು ಎಂಬ ಮಾತುಗಳು ಕೊಂಕಣಿಯ ಭಾಷಾವಲಯದಲ್ಲಿ ಕೇಳಿಬರುತ್ತಿವೆ. ಮೂಲದಲ್ಲಿ ಇವೆಲ್ಲವೂ ಒಂದೇ ಮೊಗಸಾಲೆಯ ನಾಮಮಾತ್ರದ ವಿವಿಧ ಲೆಟರ್ ಹೆಡ್ ಸಂಘಟನೆಗಳಾಗಿದ್ದು, ಇದರ ಅಧ್ಯಕ್ಷ ಅದರಲ್ಲಿ ಕಾರ್ಯದರ್ಶಿ, ಅದರ ಕಾರ್ಯದರ್ಶಿ ಇದರಲ್ಲಿ ಅಧ್ಯಕ್ಷ. ಒಂಥರಾ ಸಂಗೀತ ಕುರ್ಚಿ ಆಟವಿದ್ದಂತೆ. ಪಧಾದಿಕಾರಿಗಳಲ್ಲಿ ಒಬ್ಬಿಬ್ಬರು ನಾಮ್ ಕೆ ವಾಸ್ತೇ ಬರಹಗಾರರು ಬಿಟ್ಟರೆ ಉಳಿದಂತೆ ಬಹುತೇಕ ಉದ್ಯಮಿಗಳು. ಕೊಂಕಣಿಯ ಕಾರ್ಯಕ್ರಮದ ಶಾಮಿಯಾನದಿಂದ ಹಿಡಿದು, ಊಟೋಪಚಾರ, ಮೈಕ್ ಎಲ್ಲಾ ಬಿಲ್ಗಳೂ ಇವರದೇ ಖಾತೆಗಳಿಗೆ ಜಮಾ ಆಗುತ್ತವೆಯೆಂಬ ಶಂಕೆಗಳಿವೆ. ಆದುದರಿಂದ ಕೊಂಕಣಿ ಚಳುವಳಿಗೆ ಬೆಂಬಲ ನೀಡುವುದರಿಂದ ಕನ್ನಡ ಭಾಷೆಗೆ ಒಳಿತಾಗಬೇಕಾದರೆ ನಿಮ್ಮಂತವರು ನಾಲ್ಕು ಜನ ಕನ್ನಡ ಉದ್ಯಮಿಗಳನ್ನು ಈ ಸಂಘಟನೆಗಳ ಸದಸ್ಯರನ್ನಾಗಿ ಮಾಡಿದರೆ ಮಾತ್ರ ಸಾಧ್ಯವಾದೀತು ಎಂಬುದು ನನ್ನ ಊಹೆ.
ನಿಮ್ಮ ಲೇಖನವನ್ನು ಕಾಕತಾಳಿಯವೋ ಎಂಬಂತೆ ಕೊಂಕಣಿ ಅಕಾಡೆಮಿಯ ಹೊಸ ಅಧ್ಯಕ್ಷರ ಬೆಂಬಲದ ಮೇಲೆ ತಂದು ನಿಲ್ಲಿಸಿದ್ದೀರಿ. ದಿನಾಂಕ 28 - 02 - 2014 ರ ನಿಮ್ಮ ಪತ್ರಿಕೆಯಲ್ಲಿ ಹೊಸ ಅಕಾಡೆಮಿ ಅಧ್ಯಕ್ಷರುಗಳ ಪರಿಚಯ ಪ್ರಕಟವಾಗಿದ್ದನ್ನು ನೀವು ಗಮನಿಸಿದ್ದೀರೆಂದು ನಾನಂದುಕೊಂಡಿದ್ದೇನೆ. ತುಳು, ಬ್ಯಾರಿ ಅಕಾಡೆಮಿಯ ಅಧ್ಯಕ್ಷರುಗಳು ಎಷ್ಟು ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ ಎಂಬ ಬಗ್ಗೆ ವಿವರವನ್ನು ಕೊಟ್ಟಿರುವ ನಿಮ್ಮ ಪತ್ರಿಕೆ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು ಕೊಂಕಣಿ ಸಾಹಿತ್ಯಕ್ಕೆ ನೀಡಿದ ಕೊಡುಗೆಯನ್ನು ನಮೂದಿಸಲು ಮರೆತದ್ದು ಬರೀ ಆಕಸ್ಮಿಕವಿರಬಹುದೇ ? ಇದನ್ನು ನಿಮ್ಮ ವಿವೇಕಕ್ಕೆ ಬಿಡುತ್ತೇನೆ.
ನಿಮ್ಮ ಒಟ್ಟು ಬರಹವನ್ನು ಓದಿ ನಾನು ಮಾತ್ರ ಗೊಂದಲಕ್ಕೊಳಗಾಗಿದ್ದೇನೆ. ಅಭಿಮತ ಅಂದರೆ ಅದು ಯಾರ ಪುಟ? ಇದು ನಿಮ್ಮದೇ ಸ್ವಂತ ಅಭಿಪ್ರಾಯವೇ ಅಥವಾ ನೀವು ಸಂಗ್ರಹಿಸಿದ ಅಭಿಪ್ರಾಯಗಳ ಸಾರಾಂಶವೇ? ಒಂದು ಪಕ್ಷ ಇದು ನಿಮ್ಮದೇ ಅಭಿಪ್ರಾಯವಾಗಿದ್ದರೆ ಯಾರೋ ಒಬ್ಬ ರೂವಾರಿ ಬಂದು ಏನೋ ಹೇಳಿದ್ದನ್ನು ಪರಮಸತ್ಯ ಎಂದು ನಂಬುವ ನಿಮ್ಮ ಮುಗ್ಧತೆಯ ಮೇಲೆ ನನಗೆ ಅಯ್ಯೋ ಅನ್ನಿಸುತ್ತೆ. ಇನ್ನೊಂದು ಪಕ್ಷ ನೀವು ಅಭಿಪ್ರಾಯ ಸಂಗ್ರಹಿಸಿ ಬರೆದ ಬರಹವಾದರೆ , ಭಾಷೆ ಮತ್ತು ಸಾಹಿತ್ಯಕ್ಕೆ ಸಂಬಂದಪಟ್ಟ ಒಂದು ಸಂಕೀರ್ಣ ವಿಷಯದ ಮೇಲೆ ಬಹರಗಾರನೇ ಅಲ್ಲದವನ ಅಭಿಪ್ರಾಯವನ್ನು ಕಣ್ಮುಚ್ಚಿ ಕೇಳಿ ಬರೆಯುವುದನ್ನು ಪತ್ರಿಕಾಧರ್ಮ ಎಂದು ತಿಳಿದಿರುವ ನಿಮ್ಮ ಅಜ್ಞಾನದ ಬಗ್ಗೆ ರೇಜಿಗೆಯಿದೆ.
ಮುಗಿಸುವ ಮುನ್ನ ನಿಮಗೊಂದು ರೋಚಕ ವಿಷಯವನ್ನು ಹೇಳಿ ಮುಗಿಸುತ್ತೇನೆ. ಹೆಚ್ಚು ಹಿಂದೆ ಹೋಗುವುದು ಬೇಡ, ಈಗ್ಗೆ ಒಂದು ವರ್ಷದ ಹಿಂದೆ, ನಿಮ್ಮದೇ ಬಳಗದ ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಮಾರ್ಚ್ 7, 2013 ರಂದು ಪ್ರಕಟವಾದ Convention on ’Konkani in liturgy’ on March 10 ಎಂಬ ವರದಿಯನ್ನು ಓದಿ ನೋಡಿ.
ಆನ್ಲೈನ್ ಲಿಂಕ್ ಬೇಕಾದರೆ ಇಲ್ಲಿದೆ :
http://www.deccanherald.com/content/317097/convention-konkani-liturgy-march-10.html
ಕೊಂಕಣಿ ಮೂಲಕ ಕನ್ನಡವನ್ನು ಬಲಪಡಿಸುವ ಮತ್ತು ಕೊಂಕಣಿ ಗಟ್ಟಿಗೊಳಿಸಲು ಕನ್ನಡ ಬಲ ಬೇಡುವ ಮಹಾನ್ ಕೊಂಕಣಿ ಚಳುವಳಿಗಾರರು ಎಂದು ನೀವು ಗಟ್ಟಿಯಾಗಿ ನಂಬಿದವರ ಅಸಲಿಯತ್ತು ನಿಮಗೇ ಗೊತ್ತಾಗುತ್ತದೆ. ಇಲ್ಲಿ ಜಾಗತಿಕ, ಅಖಿಲ ಭಾರತ ಎಂದು ಸಂಘಟನೆ ಕಟ್ಟಿದವರೇ ಚಿಕ್ಕಮಗಳೂರಿನಲ್ಲಿ ಕೊಂಕಣಿ ಸಂಘಟನೆ ಕಟ್ಟಿ ಕನ್ನಡದವರ ವಿರುದ್ಧ ಹೋರಾಡುತ್ತಿದ್ದಾರೆ. ವಿಷಯ - ಚಿಕ್ಕಮಗಳೂರಿನಲ್ಲಿ ಕೊಂಕಣಿ ಭಾಷಿಕರ ಮೇಲೆ ಕನ್ನಡ ಹೇರುತ್ತಾರೆ ! ಆಶ್ಚರ್ಯವಾಯಿತೆ ? ನಿಮ್ಮ ಲೇಖನದಲ್ಲಿ ದೇವನಾಗರಿ ಲಿಪಿ ಬಳಸುವವರನ್ನು ಫ್ಯಾಸಿಸಂ ಮಾಡುತ್ತಾರೆ ಎಂದು ಮೂದಲಿಸಿದವರೇ, ಅಲ್ಲಿ ನಿಮ್ಮನ್ನು , ಹೌದು ಕನ್ನಡದವರನ್ನು , ಲ್ಯಾಂಗ್ವೇಜ್ ಫನಟಿಕ್ಸ್ ಎಂದಿದ್ದಾರೆ. ಇದನ್ನೊಮ್ಮೆ ಓದಿ ನೋಡಿ :
“Konkanis have demanded this right and have even agitated against this. Now to add to their woes, a few language fanatics in Karnataka have even begun attacking people praying in their mother-tongue, other than in Kannada. There has been many such instances of attacks on Konkani and Tamil masses,” he complained
ಅವಕಾಶಕ್ಕೆ ತಕ್ಕಂತೆ ಬಣ್ಣ ಬದಲಿಸುವ ಈ ಆಂತರಿಕ ಚಳುವಳಿಗಾರರರ ಇಂತಹ ಎಷ್ಟೊ ಉದಾಹರಣೆಗಳನ್ನು ನಾನು ನಿಮಗೆ ಕೊಡಬಹುದು. ನೀವು ಕೊಂಚ ಬಿಡುವು ಮಾಡಿ ಈ ಕುರಿತು ಒಂದು ಅಂಕಣ ಬರೆದರೆ ಈ ಮುಖವಾಡಗಳು ಕಳಚಿಬಿದ್ದು ಕೊಂಕಣಿ ಉದ್ದಾರವಾಗುವುದರ ಜೊತೆಗೆ, ಕೊಂಕಣಿ, ಕನ್ನಡ ಮತ್ತು ಇನ್ನಿತರ ಭಾಷೆಗಳ ನಡುವೆ ಸಾಮರಸ್ಯ ನೆಲೆಸೀತು.
ನಿಮ್ಮದು ಮತ್ತು ನಮ್ಮದೂ ಒಳ್ಳೆಯದಾಗಲಿ.
- ಎಚ್ಚೆಮ್
♦ ಕರ್ನಾಟಕದಲ್ಲಿ ಕೊಂಕಣಿಗೆ ಬಲವಂತದ ಉದ್ಯಮ ಸ್ನಾನ ? - ಉದಯವಾಣಿ ಬರ್ಪಾಕ್ ಜಾಪ್