ಎಚ್ಚೆಮ್ ಪೆರ್ನಾಲ್
ಕಳೆದ ಸುಮಾರು 40 ವರ್ಷಗಳಿಂದ ಕೊಂಕಣಿ, ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಎಚ್ಚೆಮ್, ಪೆರ್ನಾಲ್ ಕಾವ್ಯನಾಮದಲ್ಲಿ ಬರೆಯುತ್ತಿರುವ ಹೆನ್ರಿ ಮೆಂಡೋನ್ಸಾ ಇವರ ಮೂರು ಕವನ ಸಂಕಲನ, ಎರಡು ಕಥಾ ಸಂಗ್ರಹ ಮತ್ತು ಒಂದು ವಿಮರ್ಶಾ ಲೇಖನಗಳ ಸಂಗ್ರಹ ಪ್ರಕಟವಾಗಿವೆ. ಅವರ 'ಬೀಗ್ ಆನಿ ಬಿಗಾತ್' ಕಥಾ ಸಂಗ್ರಹಕ್ಕೆ ವಿಶ್ವ ಕೊಂಕಣಿ ವಿಮಲಾ ವಿ ಪೈ ಸಾಹಿತ್ಯ ಪ್ರಶಸ್ತಿ, 'ಕೊಂಕಣಿ ಕಾವ್ಯೆಂ ; ರುಪಾಂ ಆನಿ ರೂಪಕಾಂ' ಪುಸ್ತಕಕ್ಕೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರಶಸ್ತಿ, ಕೊಂಕಣಿ ಕಾವ್ಯ ಕ್ಷೇತ್ರಕ್ಕೆ ನೀಡಿದ ದೇಣಿಗೆಗೆ 'ಮಥಾಯಸ್ ಕುಟಮ್ ಕವಿತಾ ಪ್ರಶಸ್ತಿ', ಸಾಹಿತ್ಯ ಸಾಧನೆಗೆ 'ಕರ್ನಾಟಕ ಕೊಂಕಣಿ ಅಕಾಡೆಮಿ ಗೌರವ ಪ್ರಶಸ್ತಿ' ಮತ್ತು ಕೊಂಕಣಿ ಸಾಹಿತ್ಯ ಮತ್ತು ಪತ್ರಿಕೋದ್ಯಮಕ್ಕೆ ನೀಡಿದ ಸೇವೆಗೆ 'ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ'ಗಳು ದೊರೆತಿವೆ. ಅವರು ಕಿಟಾಳ್.ಕೊಮ್ ಅಂತರ್ಜಾಲ ಸಾಹಿತ್ಯ ಪತ್ರಿಕೆ, ಆರ್ಸೊ ಮಾಸಪತ್ರಿಕೆ ಮತ್ತು ಕಿಟಾಳ್ ಪ್ರಕಾಶನ ಸಂಸ್ಥೆಯ ಸ್ಥಾಪಕರಾಗಿದ್ದಾರೆ.